ಮುಂಬೈ(ಮೇ.20): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಇಂಜುರಿ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಹೀಗಾಗಿ ರೋಹಿತ್ ಶರ್ಮಾ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಮತ್ತೊರ್ವ ಆರಂಭಿಕ ಬ್ಯಾಟ್ಸಮನ್ ಸಿದ್ದೇಶ್ ಲಾಡ್‍‌ಗೆ ಅವಕಾಶ ಸಿಕ್ಕಿತ್ತು. ಕಳೆದ 5 ವರ್ಷಗಳಲ್ಲಿ ಸಿದ್ದೇಶ್ ಲಾಡ್ ಸಿಕ್ಕಿದ ಮೊದಲ ಅವಕಾಶ ಇದಾಗಿತ್ತು.

ಇದನ್ನೂ ಓದಿ: ಕ್ಯಾನ್ಸರ್‌ಗೆ ಸ್ಟಾರ್ ಕ್ರಿಕೆಟಿಗನ 2 ವರ್ಷದ ಮಗಳು ಬಲಿ-ಮುಗಿಲು ಮುಟ್ಟಿದೆ ಆಕ್ರಂದನ!

ಆರಂಭಿಕನಾಗಿ ಕಣಕ್ಕಿಳಿದ ಸಿದ್ದೇಶ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ್ದರು. 13 ಎಸೆತದಲ್ಲಿ 15 ರನ್ ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ದರು. ಮುಂಬೈ ರಣಜಿ ತಂಡದ ಟ್ರಬಲ್ ಶೂಟರ್ ಎಂದೇ ಹೆಸರುವಾಸಿಯಾಗಿರುವ ಸಿದ್ದೇಶ್ ಲಾಡ್‌ಗೆ ಐಪಿಎಲ್ ಟೂರ್ನಿಯಲ್ಲಿ ಮಿಂಚಲು ಅವಕಾಶವೇ ಸಿಕ್ಕಿಲ್ಲ. 2015ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಸಿದ್ದೇಶ್ ಲಾಡ್ ಖರೀದಿ ಮಾಡಿತ್ತು. ಆದರೆ ಅವಕಾಶ ಸಿಕ್ಕಿದ್ದು 2019ರಲ್ಲಿ ಅನ್ನೋದೇ ದುರಂತ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‍‌ಗೆ ಯುವರಾಜ್ ಶೀಘ್ರದಲ್ಲೇ ನಿವೃತ್ತಿ?

ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಪ್ಲೇಯರ್‌ ದಂಡೇ ಇದೆ. ಹೆಚ್ಚಿನ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಬದಲಾವಣೆ ಮಾಡುವುದಿಲ್ಲ. ಇಂಜುರಿ ಹೊರತು ಪಡಿಸಿದರೆ ಸುಖಾಸುಮ್ಮನೆ ಬದಲಾವಣೆ ಮಾಡುವುದಿಲ್ಲ. ಹೀಗಾಗಿ ನನಗೆ ಅವಕಾಶ ಸಿಕ್ಕಿಲ್ಲ ಎಂದು ಸಿದ್ದೇಶ್ ಲಾಡ್ ಅಳಲು ತೋಡಿಕೊಂಡಿದ್ದಾರೆ.

ಮುಂಬೈ ತಂಡದಲ್ಲಿ ಆರಂಭಿಕನಾಗಿ ರೋಹಿತ್ ಶರ್ಮಾ ಖಾಯಂ. ಮತ್ತೊರ್ವ ಆರಂಭಿಕ ದಿಗ್ಗಜ ಆಟಗಾರನೇ ಆಗಿರುತ್ತಾರೆ. ಹೀಗಾಗಿ ನನಗೆ ಅವಕಾಶ ಸಿಕ್ಕಿಲ್ಲ. ಸಿದ್ದೇಶ್ ಖರೀದಿ ಮಾಡಿದ ವರ್ಷವೇ ಹಾರ್ದಿಕ್ ಪಾಂಡ್ಯ ಕೂಡ ಮುಂಬೈ ತಂಡ ಸೇರಿಕೊಂಡಿದ್ದರು. ಆದರೆ ಪಾಂಡ್ಯ ಈಗ ಟೀಂ ಇಂಡಿಯಾದ ಸ್ಟಾರ್ ಆಟಗಾರನಾಗಿದ್ದರೆ, ಸಿದ್ದೇಶ್ ಈಗಲೂ ಮುಂಬೈ ರಣಜಿ ತಂಡಕ್ಕೆ ಸೀಮಿತವಾಗಿದ್ದಾರೆ. ಇದೀಗ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಕ್ಕಾಗಿ ಸಿದ್ದೇಶ್ ಕಾಯುತ್ತಿದ್ದಾರೆ.