ಅತೀ ವೇಗದ ಅರ್ಧಶತಕ ಸಿಡಿಸಿ ಮಹಿಳಾ ಕ್ರಿಕೆಟ್‌ನಲ್ಲಿ ದಾಖಲೆ ಬರೆದಿರುವ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಾನ ಬ್ಯಾಟಿಂಗೆ ಶ್ರೀಲಂಕಾ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಮೆಚ್ಚುಗೆ ವ್ಯಕ್ತಪಡಸಿದ್ದಾರೆ. ಮಂದಾನ ಕುರಿತು ಸಂಗಕ್ಕಾರ ಹೇಳಿದ್ದೇನು? ಮಂದಾನ ಬ್ಯಾಟಿಂಗ್ ಹೇಗಿತ್ತು? ಇಲ್ಲಿದೆ.
ಟೌನ್ಟನ್(ಜು.30): ಟೀಂ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂದನಾ ಅತೀ ವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕೆಐಎ ಸೂಪರ್ ಲೀಗ್ ಟೂರ್ನಿಯಲ್ಲಿ ಮಂದಾನ ಕೇವಲ 18 ಎಸೆತದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಕೆಐಎ ಲೀಗ್ ಟೂರ್ನಿಯಲ್ಲಿ ವೆಸ್ಟರ್ನ್ ಸ್ಟೋಮ್ ತಂಡದ ಪರ ಆಡುತ್ತಿರುವ ಸ್ಮೃತಿ ಮಂದಾನ, ಲಾಘ್ಬೋರಫ್ ತಂಡದ ವಿರುದ್ಧ ಸಾಧನೆ ಮಾಡಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಆಟಗಾರ್ತಿ ಸೋಫಿ ಡೆವಿನ್ ಸಾಧನೆಯನ್ನ ಸರಿಗಟ್ಟಿದ್ದಾರೆ. ಸ್ಮೃತಿ ಮಂದಾನ ಸ್ಫೋಟಕ ಇನ್ನಿಂಗ್ಸ್‌ಗೆ ಶ್ರೀಲಂಕಾ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಮನಸೋತಿದ್ದಾರೆ.
ಸ್ಮೃತಿ ಮಂದನಾ ಬ್ಯಾಟಿಂಗ್‌ಗೆ ಕುಮಾರ ಸಂಗಕ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟರ್ ಮೂಲಕ ಮಂದನ ಪ್ರದರ್ಶನವನ್ನ ಕೊಂಡಾಡಿದ್ದಾರೆ. ಮಂದಾನ ಬೌಲರ್‌ಗಳ ದಂಡಿಸಿದ ರೀತಿ ಅದ್ಬುತ. ಅತ್ಯುತ್ತಮ ಕ್ರಿಕೆಟ್ ಸ್ಕಿಲ್ಸ್. ಈಕೆ ಕ್ರಿಕೆಟ್ ರಾಯಭಾರಿ ಎಂದು ಸಂಗಾ ಟ್ವೀಟ್ ಮಾಡಿದ್ದಾರೆ.
ಕುಮಾರ ಸಂಗಕ್ಕಾರ ಟ್ವೀಟ್‌ನಿಂದ ಪುಳಕಿತಗೊಂಡಿರುವ ಮಂದಾನ, ಧನ್ಯವಾದ ಹೇಳಿದ್ದಾರೆ. ಮಂದಾನ ರೋಲ್ ಮಾಡೆಲ್ ಕುಮಾರ ಸಂಗಕ್ಕಾರ ತನ್ನ ಬ್ಯಾಟಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರೋದು ಮಂದಾನ ಖುಷಿಯನ್ನ ಇಮ್ಮಡಿಗೊಳಿಸಿದೆ. ಇಷ್ಟೇ ಅಲ್ಲ ಕುಮಾರ ಸಂಗಕ್ಕಾರ ಭೇಟಿಯಾಗಿ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
