ಭಾರತದ ಗೆಲುವಿಗೆ 269 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್

Kuldeep Yadav stars with six wickets England all out for 268
Highlights

ಕುಲದೀಪ್ ಯಾದವ್ ಸ್ಪಿನ್ ಮೋಡಿಯಿಂದ ಇಂಗ್ಲೆಂಡ್ ತಂಡವನ್ನ 268 ರನ್‌ಗೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇಂಗ್ಲೆಂಡ್ ಬ್ಯಾಟಿಂಗ್ ಹಾಗೂ ಭಾರತದ ಬೌಲಿಂಗ್ ಹೈಲೈಟ್ಸ್ ಇಲ್ಲಿದೆ. 
 

ನಾಟಿಂಗ್‌ಹ್ಯಾಮ್(ಜು.12): ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 269  ರನ್ ಟಾರ್ಗೆಟ್ ಪಡೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗಧಿತ 49.5 ಓವರ್‌ಗಳಲ್ಲಿ  268 ರನ್‌ಗೆ ಆಲೌಟ್ ಆಯಿತು.

ಉತ್ತಮ ಆರಂಭ ಪಡೆದಿದ್ದ ಇಂಗ್ಲೆಂಡ್ ತಂಡಕ್ಕೆ ಕುಲದೀಪ್ ಯಾದವ್ ಶಾಕ್ ನೀಡಿದರು.  ಜೇಸನ್ ರಾಯ್ 38,  ಜೋ ರೂಟ್ 3,  ಜಾನಿ ಬೈರಿಸ್ಟೋ 38  ಹಾಗೂ ನಾಯಕ ಇಯಾನ್ ಮಾರ್ಗನ್ 19 ರನ್ ಸಿಡಿಸಿ ಔಟಾದರು. ಆದರೆ ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕ ಸಿಡಿಸಿದರು. ಬಟ್ಲರ್ 53 ರನ್ ಸಿಡಿಸಿ ಔಟಾದರು. ಬೆನ್ ಸ್ಟೋಕ್ಸ್ ಅರ್ಧಶತಕ ಸಿಡಿಸಿದ ಬೆನ್ ಸ್ಟೋಕ್ಸ್ ಪೆವಿಲಿಯನ್ ಸೇರಿಕೊಂಡರು.

ಡೇವಿಡ್ ವಿಲೆ ಕೇವಲ 1 ರನ್ ಸಿಡಿಸಿ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕುಲದೀಪ್ ಬರೋಬ್ಬರಿ 6 ವಿಕೆಟ್ ಕಬಳಿಸಿ ದಾಖಲೆ ಬರೆದರು. ಮೊಯಿನ್ ಆಲಿ 24 ರನ್ ಬಾರಿಸಿ ಔಟಾದರು.

ಆದಿಲ್ ರಶೀದ್ 22 ರನ್ ಸಿಡಿಸಿ ಔಟಾದರು. ಇನ್ನು ಲಿಯಾಮ್ ಪ್ಲೆಂಕೆಟ್ 10  ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಈ ಮೂಲಕ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 268 ರನ್‌ಗೆ ಆಲೌಟ್ ಆಯಿತು. ಉಮೇಶ್ ಯಾದವ್ 2 ಹಾಗೂ ಯಜುವೇಂದ್ರೆ ಚೆಹಾಲ್ 1 ವಿಕೆಟ್ ಪಡೆದರು.
 

loader