ಇಬ್ಬನಿ ಬೀಳುವುದರಿಂದ ಚೆಂಡು ಒದ್ದೆಯಾಗಲಿದ್ದು, ಅದನ್ನು ಭದ್ರವಾಗಿ ಹಿಡಿದುಕೊಳ್ಳಲು ಕಷ್ಟವಾಗಬಹುದು ಎನ್ನುವ ಕಾರಣ, ಕುಲ್ದೀಪ್ ಒದ್ದೆ ಚೆಂಡಿನೊಂದಿಗೆ ಅಭ್ಯಾಸ ನಡೆಸಿದರು.
ನವದೆಹಲಿ(ನ.01): ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ವೇಳೆ ಇಬ್ಬನಿ ಬೀಳಬಹುದು ಎನ್ನುವ ಮುಂದಾಲೋಚನೆಯಿಂದ ಭಾರತದ ಕುಲ್ದೀಪ್ ಯಾದವ್ ಅಭ್ಯಾಸದ ವೇಳೆ ಹೊಸ ತಂತ್ರವನ್ನು ಅಳವಡಿಸಿಕೊಂಡಿದ್ದು ಭಾರೀ ಸುದ್ದಿಯಾಗಿದೆ.
ಇಬ್ಬನಿ ಬೀಳುವುದರಿಂದ ಚೆಂಡು ಒದ್ದೆಯಾಗಲಿದ್ದು, ಅದನ್ನು ಭದ್ರವಾಗಿ ಹಿಡಿದುಕೊಳ್ಳಲು ಕಷ್ಟವಾಗಬಹುದು ಎನ್ನುವ ಕಾರಣ, ಕುಲ್ದೀಪ್ ಒದ್ದೆ ಚೆಂಡಿನೊಂದಿಗೆ ಅಭ್ಯಾಸ ನಡೆಸಿದರು. ಚೆಂಡನ್ನು ಮಿನರಲ್ ವಾಟರ್'ನಲ್ಲಿ ಅದ್ದಿ ಬೌಲಿಂಗ್ ಮಾಡುತ್ತಿದ್ದದ್ದು ನೋಡುಗರಿಗೆ ಅಚ್ಚರಿಯನ್ನುಂಟು ಮಾಡಿತು.
ಇಬ್ಬನಿ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಇಲ್ಲಿನ ಪಿಚ್ ಕ್ಯುರೇಟರ್‌ಗಳು ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರೆ ಯಾವುದೇ ಆಶ್ಚರ್ಯವಿಲ್ಲ. ಕಾರಣ, ಇಬ್ಬನಿಯಿಂದಾಗಿ ಚೆಂಡು, ಬ್ಯಾಟ್'ಗೆ ಸುಲಭವಾಗಿ ಸಿಗಲಿದೆ. ಹೀಗಾಗಿ, ಬ್ಯಾಟ್ಸ್'ಮನ್'ಗಳಿಗೆ ಹೆಚ್ಚಿನ ಸಹಕಾರ ದೊರೆಯಲಿದ್ದು, ಎಷ್ಟೇ ದೊಡ್ಡ ಮೊತ್ತವಿದ್ದರೂ ಅದನ್ನು ಬೆನ್ನಟ್ಟುವ ಸಾಧ್ಯತೆ ಹೆಚ್ಚಿರಲಿದೆ ಎಂದು ಕ್ಯುರೇಟರ್ ಅಭಿಪ್ರಾಯಪಟ್ಟಿದ್ದಾರೆ.
