ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ನಾಳೆಯಿಂದ(ಅ.21) ಆರಂಭವಾಗಲಿದೆ.
ಮುಂಬೈ(ಅ.21): ಭಾರತದ ಯುವ ಸ್ಪಿನ್ನರ್'ಗಳನ್ನು ಕೊಂಡಾಡಿರುವ ತಂಡದ ಉಪನಾಯಕ ರೋಹಿತ್ ಶರ್ಮಾ, ‘ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್'ರನ್ನು ಎದುರಿಸುವುದು ನ್ಯೂಜಿಲೆಂಡ್'ಗೆ ದೊಡ್ಡ ಸವಾಲಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಿವೀಸ್ ಬ್ಯಾಟ್ಸ್‌ಮನ್'ಗಳನ್ನು ಕಟ್ಟಿಹಾಕಲು ಇಬ್ಬರೂ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿಯಲಿದ್ದಾರೆ. ಪ್ರಯೋಗಗಳನ್ನು ನಡೆಸಲು ಕುಲ್ದೀಪ್ ಹಾಗೂ ಚಾಹಲ್ ಹೆದರುವುದಿಲ್ಲ’ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ 22 ವರ್ಷದ ಕುಲ್ದೀಪ್ 9 ವಿಕೆಟ್ ಕಬಳಿಸಿದ್ದರೆ, ಹರ್ಯಾಣ ಮೂಲದ ಯುಜುವೇಂದ್ರ ಚಾಹಲ್ 7 ವಿಕೆಟ್ ಪಡೆದು ಮಿಂಚಿದ್ದಾರೆ.
ಇದೇ ವೇಳೆ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಎದುರಿಸಲು ಭಾರತೀಯ ಬ್ಯಾಟ್ಸ್‌ಮನ್'ಗಳು ಸಿದ್ದರಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ನಾಳೆಯಿಂದ(ಅ.21) ಆರಂಭವಾಗಲಿದೆ.
