Asianet Suvarna News Asianet Suvarna News

ಕ್ರುನಾಲ್ ಪಾಂಡ್ಯ-ದೀಪಕ್ ಚಹಾರ್‌ಗೆ ಟೀಂ ಇಂಡಿಯಾದಿಂದ ಚೊಚ್ಚಲ ಕರೆ

ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಟೀಂಇಂಡಿಯಾದಲ್ಲಿ ಗಾಯದ ಸಮಸ್ಯೆ ಉಲ್ಬಣಿಸಿದೆ. ಹೀಗಾಗಿ ಜಸ್‌ಪ್ರೀತ್ ಬುಮ್ರಾ ಹಾಗೂ ವಾಶಿಂಗ್ಟನ್ ಸುಂದರ್ ಬದಲು ಟೀಮ್ ಇಂಡಿಯಾ ಯುವ ಕ್ರಿಕೆಟಿಗರಿಗೆ ಮಣೆ ಹಾಕಿದೆ. ಹಾಗಾದರೆ ಟೀಂ ಇಂಡಿಯಾದ ನೂತನ ತಂಡ ಹೇಗಿದೆ ?

Krunal Pandya, Deepak Chahar get maiden India call-up

ಮುಂಬೈ(ಜು.01): ಇಂಜುರಿ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ವಾಶಿಂಗ್ಟನ್ ಸುಂದರ್ ಬದಲಿಗೆ ಇಬ್ಬರು ಯುವ ಕ್ರಿಕೆಟಿಗರು ಸೆಲೆಕ್ಷನ್ ಕಮಿಟಿ ಆಯ್ಕೆ ಮಾಡಿದೆ.

ಬುಮ್ರಾ ಹಾಗೂ ಸುಂದರ್ ಬದಲು,  ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವಿತ  ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಕ್ರಿಕೆಟಿಗ ದೀಪಕ್ ಚಹಾರ್ ಚೊಚ್ಚಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ.  ವಾಶಿಂಗ್ಟನ್ ಸುಂದರ್ ಏಕದಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಹೀಗಾಗಿ ಏಕದಿನ ಪಂದ್ಯದಲ್ಲಿ ಸುಂದರ್ ಬದಲು ಅಕ್ಸರ್ ಪಟೇಲ್ ತಂಡ ಸೇರಿಕೊಳ್ಳಲಿದ್ದಾರೆ. 

ಕೈಬೆರಳಿನ ಗಾಯದಿಂದ ಜಸ್‌ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಟಿ20 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆದರೆ ಏಕದಿನ ಟೂರ್ನಿಗೆ ವಾಪಾಸ್ಸಾಗೋ ಸಾಧ್ಯತೆ ಇದೆ. ಜುಲೈ 3 ರಿಂದ ಇಂಗ್ಲೆಂಡ್ ವಿರುದ್ಧದ 3 ಟಿ20 ಪಂದ್ಯದ ಸರಣಿ ಆರಂಭಗೊಳ್ಳಲಿದೆ. 

ಭಾರತ ಟಿ20 ತಂಡ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್,ರೋಹಿತ್ ಶರ್ಮಾ,ಕೆಎಲ್ ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡೆ, ಎಂ ಎಸ್ ಧೋನಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚೆಹಾಲ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಉಮೇಶ್ ಯಾದವ್, ದೀಪಕ್ ಚಹಾರ್
 

Follow Us:
Download App:
  • android
  • ios