ಕೆಕೆಆರ್’ಗೆ ಸವಾಲಿನ ಗುರಿ ನೀಡಿದ ಹೈದರಾಬಾದ್; ಮಾರಕ ದಾಳಿ ನಡೆಸಿದ ಕನ್ನಡಿಗ

Krishna four for restricts SRH to 172 for 9
Highlights

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಹೈದರಾಬದ್ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಶ್ರೀವಾತ್ಸವ್ ಗೋಸ್ವಾಮಿ-ಧವನ್ ಜೋಡಿ 79 ರನ್’ಗಳ ಜತೆಯಾಟವಾಡಿತು. 

ಹೈದರಾಬಾದ್[ಮೇ.19]: ಯುವ ವೇಗಿ ಪ್ರಸಿದ್ಧ್ ಕೃಷ್ಣ ಮಾರಕ ದಾಳಿಯ ಹೊರತಾಗಿಯೂ ಶಿಖರ್ ಧವನ್ ಆಕರ್ಷಕ ಅರ್ಧಶತಕದ ನೆರವಿನಿಂದ 172 ರನ್’ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಹೈದರಾಬದ್ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಶ್ರೀವಾತ್ಸವ್ ಗೋಸ್ವಾಮಿ-ಧವನ್ ಜೋಡಿ 79 ರನ್’ಗಳ ಜತೆಯಾಟವಾಡಿತು. ಆ ಬಳಿಕ ನಾಯಕ ವಿಲಿಯಮ್ಸನ್ ಜತೆ ಇನಿಂಗ್ಸ್ ಕಟ್ಟಿದ ಧವನ್ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಧವನ್[50] ರನ್ ಬಾರಿಸಿ ಪ್ರಸಿದ್ಧ್’ಗೆ ವಿಕೆಟ್ ಒಪ್ಪಿಸಿದರೆ, ವಿಲಿಯಮ್ಸನ್[36] ಹಾಗೂ ಮನೀಶ್ ಪಾಂಡೆ[25] ರನ್ ಬಾರಿಸುವ ಮೂಲಕ ಸವಾಲಿನ ಮೊತ್ತ ಕಲೆಹಾಕಿದೆ.
ಕೊನೆಯ ಓವರ್’ನಲ್ಲಿ ಮಾರಕ ದಾಳಿ ನಡೆಸಿದ ಪ್ರಸಿದ್ಧ್ ಕೃಷ್ಣ ಸನ್’ರೈಸರ್ಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಪಂದ್ಯದಲ್ಲಿ ಒಟ್ಟು 4 ವಿಕೆಟ್ ಕಬಳಿಸುವ ಮೂಲಕ ಕನ್ನಡಿಗ ಪ್ರಸಿದ್ಧ್ ಕೃಷ್ಣ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್:
KKR: 172/9
ಧವನ್: 50
ಪ್ರಸಿದ್ಧ್ : 30/4  
[* ವಿವರ ಅಪೂರ್ಣ]  

loader