Asianet Suvarna News Asianet Suvarna News

KPL 2019: ಲೀಗ್ ಹೋರಾಟ ಅಂತ್ಯ, ಪ್ಲೇ ಆಫ್‌ಗೆ 4 ತಂಡ ಲಗ್ಗೆ!

ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಲೀಗ್ ಹೋರಾಟಗಳು ಅಂತ್ಯಗೊಂಡಿದ್ದು, ಇಂದಿನಿಂದ ಪ್ಲೇ ಆಫ್ ಪಂದ್ಯ ನಡೆಯಲಿದೆ. 4 ತಂಡಗಳು ಪ್ರಶಸ್ತಿಗಾಗಿ ಹೋರಾಟ ಆರಂಭಿಸಲಿದೆ. ಪ್ಲೇ ಆಫ್ ಪಂದ್ಯದ ವೇಳಾಪಟ್ಟಿ, ಸಮಯ ಹಾಗೂ ಇತರ ವಿವರ ಇಲ್ಲಿದೆ.

KPL 2019 four teams qualify for playoffs in Mysuru
Author
Bengaluru, First Published Aug 28, 2019, 3:25 PM IST

ಮೈಸೂರು(ಆ.28): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಇದೀಗ ಅಂತಿಮ ಘಟ್ಟ ತಲುಪಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದಿನಿಂದ(ಆ.28) ಪ್ಲೇ ಆಫ್ ಸುತ್ತಿನ ಪಂದ್ಯಗಳು ನಡೆಯಲಿವೆ. 7 ತಂಡಗಳ ಪೈಕಿ ಬಳ್ಳಾರಿ ಟಸ್ಕರ್ಸ್, ಬೆಳಗಾವಿ ಪ್ಯಾಂಥರ್ಸ್, ಹುಬ್ಳಿ ಟೈಗರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಇದೀಗ ಈ ನಾಲ್ಕು ತಂಡಗಳು ಫೈನಲ್‌ ಪ್ರವೇಶಕ್ಕೆ ಹೋರಾಟ ನಡೆಸಲಿದೆ.

ಇದನ್ನೂ ಓದಿ: ಬೆಂಗಳೂರು ಮಣಿಸಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟ ಹುಬ್ಳಿ ಟೈಗರ್ಸ್!

ಅಂಕಪಟ್ಟಿಯಲ್ಲಿ ಅಗ್ರ 4 ತಂಡಗಳು ಇದೀಗ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯ ಆಡಲಿದೆ. ಕಳೆದ 7 ಆವೃತ್ತಿಗಳಲ್ಲಿ ಕೆಪಿಎಲ್ ಟೂರ್ನಿ ಸೆಮಿಫೈನಲ್ ಮಾದರಿ ಅನುಸರಿಸಿತ್ತು. ಇದೇ ಮೊದಲ ಬಾರಿಗೆ ಐಪಿಎಲ್ ರೀತಿಯಲ್ಲಿ ಪ್ಲೇ ಆಫ್ ಸುತ್ತು ಅಳಡಿಸಿದೆ. ಪ್ಲೇ ಆಫ್ ಪಂದ್ಯದ ವೇಳಾಪಟ್ಟಿ ಇಲ್ಲಿದೆ.

KPL ಪ್ಲೇ ಆಫ್ ಪಂದ್ಯದ ವೇಳಾಪಟ್ಟಿ(ಸ್ಥಳ: ಮೈಸೂರು, ಸಮಯ: ಸಂಜೆ 7 ಗಂಟೆ)
ಆಗಸ್ಟ್ 28, ಮೊದಲ ಕ್ವಾಲಿಫೈಯರ್: ಬಳ್ಳಾರಿ ಟಸ್ಕರ್ಸ್ vs ಬೆಳಗಾವಿ ಪ್ಯಾಂಥರ್ಸ್
ಆಗಸ್ಟ್ 29, ಎಲಿಮಿನೇಟರ್: ಶಿವಮೊಗ್ಗ ಲಯನ್ಸ್ vs ಹುಬ್ಳಿ ಟೈಗರ್ಸ್
ಆಗಸ್ಟ್ 30, 2ನೇ ಕ್ವಾಲಿಫೈಯರ್: (1ನೇ ಕ್ವಾಲಿಫೈಯರ್ ಸೋತ ತಂಡ vs ಗೆದ್ದ ಎಲಿಮಿನೇಟರ್ ತಂಡ)
ಆಗಸ್ಟ್ 31, ಫೈನಲ್( 1ನೇ ಕ್ವಾಲಿಫೈಯರ್ ಗೆದ್ದ ತಂಡ vs 2ನೇ ಕ್ವಾಲಿಫೈಯರ್ ಗೆದ್ದ ತಂಡ)

ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಅಂಕಪಟ್ಟಿ;

KPL 2019 four teams qualify for playoffs in Mysuru

Follow Us:
Download App:
  • android
  • ios