Asianet Suvarna News Asianet Suvarna News

KPL 2019 ಬಿಜಾಪುರ ಬುಲ್ಸ್ ಮಣಿಸಿದ ಬೆಳಗಾವಿ ಪ್ಯಾಂಥರ್ಸ್

ಶಿವಮೊಗ್ಗ ವಿರುದ್ಧ 9 ವಿಕೆಟ್ ಜಯ ಸಾಧಿಸಿದ್ದ ಬೆಳಗಾವಿ ಪ್ಯಾಂಥರ್ಸ್ ಇದೀಗ ಬಿಜಾಪುರ ಬುಲ್ಸ್ ವಿರುದ್ದವೂ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

KPL 2019 Belagavi Panthers won by 7 wickets against Bijapur Bulls
Author
Mysore, First Published Aug 26, 2019, 8:56 PM IST
  • Facebook
  • Twitter
  • Whatsapp

ಬೆಂಗಳೂರು[ಆ.26]: ಬೌಲರ್’ಗಳ ಸಂಘಟಿತ ಪ್ರದರ್ಶನ ಹಾಗೂ ಆರ್. ಸಮರ್ಥ್ ಅಜೇಯ ಅರ್ಧಶತಕದ ನೆರವಿನಿಂದ ಬಿಜಾಪುರ ಬುಲ್ಸ್ ವಿರುದ್ಧ ಬೆಳಗಾವಿ ಪ್ಯಾಂಥರ್ಸ್ ತಂಡ 7 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಅಂಕಪಟ್ಟಿಯಲ್ಲಿ ಶಿವಮೊಗ್ಗ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ.

KPL 2019: ಸ್ಟಾಲಿನ್ ಹೋವರ್ ಶತಕ, ಬೆಳಗಾವಿ ಪ್ಯಾಂಥರ್ಸ್’ಗೆ ಸುಲಭ ಜಯ

ಟಾಸ್ ಗೆದ್ದ ಬೆಳಗಾವಿ ಪ್ಯಾಂಥರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ನಾಯಕ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಪ್ಯಾಂಥರ್ಸ್ ತಂಡವು ಬಿಜಾಪುರ ಬುಲ್ಸ್ ತಂಡ ಕೇವಲ 136 ರನ್’ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ನಾಯಕ ಭರತ್ ಚಿಪ್ಳಿ[33], ಭರತ್ NP(35) ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದರು.

ಮಳೆಯಿಂದಾಗಿ KPL ಟೂರ್ನಿಯಲ್ಲಿ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!

ಸುಲಭ ಗುರಿ ಬೆನ್ನತ್ತಿದ ಬೆಳಗಾವಿ ಪ್ಯಾಂಥರ್ಸ್ 15 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದಾಗ ತಂಡದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ರವಿಕುಮಾರ್ ಸಮರ್ಥ್[50] ಹಾಗೂ ದಿಕ್ಷಾನ್ಷು ನೇಗಿ[32] ಉತ್ತಮ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಸಮರ್ಥ್ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 50 ರನ್ ಬಾರಿಸಿದರೆ, ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅಭಿನವ್ ಮನೋಹರ್ ಅಜೇಯ 42 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಬೆಳಗಾವಿ ಎರಡನೇ ಸ್ಥಾನಕ್ಕೇರಿದರೆ, ಬುಲ್ಸ್ ಮೂರನೇ ಸೋಲಿನೊಂದಿಗೆ ಕೊನೆಯ ಸ್ಥಾನದಲ್ಲೇ ಉಳಿದಿದೆ. 
 

Follow Us:
Download App:
  • android
  • ios