ಮೈಸೂರು(ಆ.26): ಬಳ್ಳಾರಿ ಟಸ್ಕರ್ಸ್ ವಿರುದ್ದದ ಕೆಪಿಎಲ್ ಟೂರ್ನಿಯ 14ನೇ ಲೀಗ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ 2 ವಿಕೆಟ್‌ಗಳ ಗೆಲುವು ಸಾಧಿಸಿದೆ.  ಈ ಮೂಲಕ ಬಿಜಾಪುರ್ ಬುಲ್ಸ್ ಮೊದಲ  ಗೆಲುವಿನ ಸಿಹಿ ಕಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಬಳ್ಳಾರಿ ಟಸ್ಕರ್ಸ್ ನಿಗಧಿತ 20 ಓವರ್‌ಗಳಲ್ಲಿ 9  ವಿಕೆಟ್ ಕಳೆದುಕೊಂಡು 152 ರನ್ ಸಿಡಿಸಿತು. ರೋಹನ್ ಕದಮ್ 52 ಹಾಗೂ ಕಾರ್ತಿಕ್ ಸಿಎ 45 ರನ್‌ಗಳ ಕಾಣಿಕೆ ನೀಡಿದರು. ಉಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.

153 ರನ್ ಗುರಿ ಬೆನ್ನಟ್ಟಿದ ಬಿಜಾಪುರ ಬುಲ್ಸ್  ದಿಟ್ಟ ಹೋರಾಟ ನೀಡಿತು. ಶಿಶಿರ್ ಭವಾನೆ 31 ಹಾಗೂ ನಾಯಕ ಭರತ್ ಚಿಪ್ಲಿ 27 ರನ್‌ಗಳ ಕಾಣಿಕೆ ನೀಡಿದರು. ಕೆಎನ್ ಭರತ್ ಅಜೇಯ 72 ರನ್ ಸಿಡಿಸೋ ಮೂಲಕ ರೋಚಕ ಗೆಲುವು ತಂದುಕೊಟ್ಟರು. 19.5 ಓವರ್‌ಗಳಲ್ಲಿ ಬಿಜಾಪುರ್ ಬುಲ್ಸ್ 8 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.