ಕೆಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಹುಬ್ಬಳ್ಳಿ ಟೈಗರ್ಸ್ ಹಾಗೂ ಬಿಜಾಪುರ ಬುಲ್ಸ್ ನಡುವಿನ 2ನೇ ಸೆಮಿಫೈನಲ್ ಹೋರಾಟದ ಹೈಲೈಟ್ಸ್ ಇಲ್ಲಿದೆ.
ಮೈಸೂರು(ಸೆ.05): ಹುಬ್ಬಳ್ಳಿ ಟೈಗರ್ಸ್ ವಿರುದ್ಧ ನಡೆದ ಕೆಪಿಎಲ್ ಸೆಮಿಫೈನಲ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ 9 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಬಿಜಾಪುರ ತಂಡ 2018ರ ಕೆಪಿಎಲ್ ಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 7 ವಿಕೆಟ್ ನಷ್ಟಕ್ಕೆ 134 ರನ್ ಸಿಡಿಸಿತು. ಅಭಿಷೇಕ್ ರೆಡ್ಡಿ 42 ರನ್ ಹೊರತು ಪಡಿಸಿದರೆ ಇತರರ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾದರು.
135 ರನ್ ಟಾರ್ಗೆಟ್ ಬೆನ್ನಟ್ಟಿದ ಬಿಜಾಪುರ ಬುಲ್ಸ್ 14.5 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ನವೀನ್ ಎಂಜಿ ಅಜೇಯ 62 ಹಾಗೂ ನಾಯಕ ಭರತ್ ಚಿಪ್ಲಿ 73 ರನ್ ಕಾಣಿಕೆ ನೀಡಿದರು.
ಈ ಗೆಲುವಿನೊಂದಿಗೆ ಬಿಜಾಪುರ ತಂಡ ನಿರಾಯಾಸವಾಗಿ ಫೈನಲ್ ತಲುಪಿತು. ಫೈನಲ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ಹಾಗೂ ಬೆಂಗಳೂರು ಬಾಸ್ಟರ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.
