ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. 7ನೇ ಆವೃತ್ತಿ ಟೂರ್ನಿಯ ಹರಾಜಿಗೆ ಇನ್ನು 3 ದಿನ ಬಾಕಿ ಇದೆ. ಹೀಗಾಗಿ ತಂಡಗಳು ಆಟಗಾರರನ್ನ ರಿಟೈನ್ ಮಾಡಿಕೊಳ್ಳುತ್ತಿದೆ. ಹಾಗಾದರೆ ಸದ್ಯ ತಂಡದಲ್ಲೇ ಉಳಿದುಕೊಂಡ ಆಟಗಾರರು ಯಾರು? ಇಲ್ಲಿದೆ ವಿವರ.
ಬೆಂಗಳೂರು(ಜು.18): ಕರ್ನಾಟಕ ಪ್ರೀಮಿಯರ್ ಲೀಗ್ 7ನೇ ಆವೃತ್ತಿಯ ಆಟಗಾರರ ಹರಾಜಿಗೆ 3 ದಿನ ಬಾಕಿ ಇದ್ದು, ತಂಡಗಳು ಹರಾಜಿಗೂ ಮುನ್ನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಆರಂಭಿಸಿವೆ.
ಪ್ರತಿ ತಂಡಕ್ಕೆ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದ್ದು, ಮೈಸೂರು ವಾರಿಯರ್ಸ್ ತಂಡ ರಾಜ್ಯ ರಣಜಿ ತಂಡದ ಸ್ಪಿನ್ನರ್ ಜೆ.ಸುಚಿತ್, ವೇಗಿ ವೈಶಾಖ್ ವಿಜಯ್ ಕುಮಾರ್, ಎಸ್.ಪಿ.ಮಂಜುನಾಥ್ ಹಾಗೂ ಕೆ. ಎನ್.ಭರತ್‌ರನ್ನು ಉಳಿಸಿಕೊಂಡಿರುವುದಾಗಿ ಮಂಗಳವಾರ ಟ್ವೀಟರ್‌ನಲ್ಲಿ ಬಹಿರಂಗಗೊಳಿಸಿತು.
ಜು.21 ರಂದು 7ನೇ ಆವೃತ್ತಿಯ ಕೆಪಿಎಲ್ ಹರಾಜು ಪ್ರಕ್ರಿಯೆ ಇರುವ ಬೆನ್ನಲ್ಲೆ ಕಳೆದ ಬಾರಿಯ ರನ್ನರ್ ಅಪ್ ಬಿಜಾಪುರ ಬುಲ್ಸ್ ನಾಲ್ವರು ಆಟಗಾರರು ರೀಟೈನ್ (ಉಳಿಕೆ) ಮಾಡಿಕೊಂಡಿದೆ. ಹಿಂದಿನ ಆವೃತ್ತಿಯ ನಾಯಕ ಭರತ್ ಚಿಪ್ಲಿ, ಕೆ.ಸಿ. ಕರಿಯಪ್ಪ, ರೋನಿತ್ ಮೋರೆ ಮತ್ತು ನವೀನ್ ಎಂ.ಜಿ.
ಅವರನ್ನು ಬುಲ್ಸ್ ತನ್ನಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ತಂಡದ ಮಾಲೀಕ ಕಿರಣ್
ಕಟ್ಟಿಮನಿ ‘ಸುವರ್ಣ್ ನ್ಯೂಸ್.ಕಾಂ’ಗೆ ತಿಳಿಸಿದ್ದಾರೆ.
