* ಕೊರಿಯಾ ಓಪನ್ ಪ್ರಶಸ್ತಿ ಗೆದ್ದ ಸಾತ್ವಿಕ್-ಚಿರಾಗ್ ಜೋಡಿ * ವಿಶ್ವ ನಂ.1 ಜೋಡಿಯ ಎದುರು ಪ್ರಶಸ್ತಿ ಗೆದ್ದ ಭಾರತದ ಜೋಡಿ * 2024ರ ಪ್ಯಾರಿಸ್ ಒಲಿಂಪಿಕ್ಸ್‌ ಮೇಲೆ ಕಣ್ಣಿಟ್ಟಿರುವ ಚಿರಾಗ್-ಸಾತ್ವಿಕ್ ಜೋಡಿ

ಕೊರಿಯಾ(ಜು.23): ಭಾರತದ ಪುರುಷರ ಡಬಲ್ಸ್‌ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಪ್ರತಿಷ್ಠಿತ 2023ರ ಕೊರಿಯಾ ಓಪನ್‌ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಅಗ್ರಶ್ರೇಯಾಂಕಿತ ಇಂಡೋನೇಷ್ಯಾದ ಫಜರ್‌ ಅಲ್ಫಿಯಾನ್‌-ಮುಹಮ್ಮದ್‌ ರಿಯಾನ್‌ ಜೋಡಿ ಎದುರು ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.                                                                       

Asian Games 2023: ರೆಸ್ಲರ್ಸ್‌ ನೇರ ಆಯ್ಕೆಗೆ ಹೈಕೋರ್ಟ್‌ನಿಂದ ತಡೆಯಿಲ್ಲ..!                           

ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯ ಫೈನಲ್‌ವರೆಗಿನ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಮೂರನೇ ಶ್ರೇಯಾಂಕಿತವಾಗಿದ್ದ ಭಾರತದ ಜೋಡಿ, ಹಲವು ಬಲಿಷ್ಠ ಬ್ಯಾಡ್ಮಿಂಟನ್ ಜೋಡಿಗಳಿಗೆ ಸೋಲುಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತ್ತು. ಈ ಪೈಕಿ ವಿಶ್ವ ಎರಡನೇ ಶ್ರೇಯಾಂಕಿತ ಚೈನೀಸ್‌ ಜೋಡಿಯಾದ ಲಿಯಾಂಗ್ ವೀ ಕೆಂಗ್ ಮತ್ತಯ ವಾಂಗ್ ಚಾಂಗ್‌ ಜೋಡಿಯನ್ನು ಸೆಮೀಸ್‌ನಲ್ಲಿ ಮಣಿಸಿ ಸಾತ್ವಿಕ್-ಚಿರಾಗ್ ಜೋಡಿ ಫೈನಲ್ ಪ್ರವೇಶಿಸಿತ್ತು.  ಶನಿವಾರ ನಡೆದ ಪುರುಷರ ಡಬಲ್ಸ್‌ ಸೆಮೀಸ್‌ನಲ್ಲಿ ವಿಶ್ವ ನಂ.2 ಚೀನಾದ ಲಿಯಾಂಗ್‌ ವೀ ಕೆಂಗ್‌-ವಾಂಗ್ ಚಾಂಗ್‌ ವಿರುದ್ಧ ವಿಶ್ವ ನಂ.3 ಸಾತ್ವಿಕ್‌-ಚಿರಾಗ್‌ 21-15, 24-22 ಅಂತರದಲ್ಲಿ ಗೆಲುವು ಸಾಧಿಸಿದರು. ಈ ಮೊದಲು ಚೀನಾ ಜೋಡಿ ವಿರುದ್ಧ 2 ಬಾರಿ ಸೋತಿದ್ದ ಭಾರತದ ಜೋಡಿಗೆ ಇದು ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. 

Scroll to load tweet…

ಸೆಕ್ಸಿ ಫೋಟೋಗಳನ್ನು ಹಂಚಿಕೊಂಡ ಮಾಜಿ ವಿಂಬಲ್ಡನ್‌ ಚಾಂಪಿಯನ್‌ ಮರಿಯಾ ಶೆರಪೋವಾ..!

ಇನ್ನು ಫೈನಲ್‌ನಲ್ಲಿ ವಿಶ್ವ ನಂ.1 ಶ್ರೇಯಾಂಕಿತ ಇಂಡೋನೇಷ್ಯಾದ ಫಜರ್‌ ಅಲ್ಫಿಯಾನ್‌-ಮುಹಮ್ಮದ್‌ ರಿಯಾನ್‌ ಎದುರು ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಜೋಡಿ ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಮೂಲಕ ಚಾಂಪಿಯನ್‌ಪಟ್ಟ ಅಲಂಕರಿಸುವಲ್ಲಿ ಸಫಲವಾಯಿತು. 40 ನಿಮಿಷಗಳ ನಡೆದ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ ಸೋಲು ಅನುಭವಿಸಿದರೂ ಉಳಿದೆರಡು ಗೇಮ್‌ಗಳಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಭಾರತದ ಜೋಡಿ ಸಫಲವಾಯಿತು. ಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ 17-21, 21-13,21-14 ಗೇಮ್‌ಗಳಲ್ಲಿ ಗೆಲುವಿನ ನಗೆ ಬೀರಿತು.

Scroll to load tweet…

2023ರ BWF ವರ್ಲ್ಡ್‌ ಟೂರ್‌ನಲ್ಲಿ ಈಗಾಗಲೇ ಸ್ವಿಸ್‌ ಓಪನ್ ಹಾಗೂ ಇಂಡೋನೇಷ್ಯಾ ಓಪನ್ ಪ್ರಶಸ್ತಿ ಗೆದ್ದಿದ್ದ ಚಿರಾಗ್ ಶೆಟ್ಟಿ-ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಸಾಧನೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾದಂತೆ ಆಗಿದೆ. ಕೊರಿಯಾ ಓಪನ್ ಪ್ರಶಸ್ತಿ ಜಯಿಸುವ ಮೂಲಕ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ 2024 ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.