Asianet Suvarna News Asianet Suvarna News

ಕ್ವಾಲಿಫೈಯರ್ ತಲುಪಿದ ಕೋಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತ್ತಾ ನೀಡಿದ್ದ 169 ರನ್ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್'ಗಳಲ್ಲಿ 6 ವಿಕೇಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಅರ್ಧ ಶತಕ ಗಳಿಸಿದ ಸಂಜು ಸ್ಯಾಮ್ಸ್'ನ್ ಹಾಗೂ ನಾಯಕ 44 ರನ್ ಗಳಿಸಿದ ಅಜಿಂಕ್ಯಾ ರಹಾನೆ ಹೋರಾಟ ವ್ಯರ್ಥವಾಯಿತು.

Kolkata Knight Riders won by 25 runs http

ಕೋಲ್ಕತ್ತಾ(ಮೇ.23): ಎಲಿಮನೇಟರ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 25 ರನ್'ಗಳ ಜಯಗಳಿಸಿ ಕ್ವಾಲಿಫೈಯರ್ಸ್ ತಲುಪಿದೆ.
ಕೋಲ್ಕತ್ತಾ ನೀಡಿದ್ದ 169 ರನ್ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್'ಗಳಲ್ಲಿ 6 ವಿಕೇಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಅರ್ಧ ಶತಕ ಗಳಿಸಿದ ಸಂಜು ಸ್ಯಾಮ್ಸ್'ನ್ ಹಾಗೂ ನಾಯಕ 44 ರನ್ ಗಳಿಸಿದ ಅಜಿಂಕ್ಯಾ ರಹಾನೆ ಹೋರಾಟ ವ್ಯರ್ಥವಾಯಿತು. ಮೇ.25ರಂದು ಕ್ವಾಲಿಫೈಯರ್ಸ್ 2ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಕೋಲ್ಕತ್ತಾ ಪರ ಪಿಯೂಶ್ ಚಾವ್ಲಾ 24/2, ಕನ್ನಡಿಗ ಪ್ರಸಿದ್ಧ ಕೃಷ್ಣ 28/1 ಹಾಗೂ ಕುಲ್ದೀಪ್ ಯಾದವ್ 18/1 ವಿಕೇಟ್ ಪಡೆದರು. 
ದಿನೇಶ್, ರೆಸಲ್ ಉತ್ತಮ ಆಟ
ಈಡನ್'ಗಾರ್ಡನ್'ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಕನ್ನಡಿಗ ಗೌತಮ್ ದಾಳಿಗೆ ಆರಂಭದಲ್ಲೇ ಮುಗ್ಗರಿಸಿತು. ಆರಂಭಿಕ ಬ್ಯಾಟ್ಸ್’ಮನ್ ನರೈನ್ ಹಾಗೂ ಉತ್ತಪ್ಪ ಅವರನ್ನು ಪೆವಿಲಿಯನ್’ಗೆ ಅಟ್ಟಿದರೆ, ಲಿನ್ ಬಲಿಪಡೆಯುವಲ್ಲಿ ಮತ್ತೋರ್ವ ಕನ್ನಡಿಗ ಶ್ರೇಯಸ್ ಗೋಪಾಲ್ ಯಶಸ್ವಿಯಾದರು. 
ಒಂದು ಹಂತದಲ್ಲಿ 51 ರನ್'ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್ ಗೆ ನಾಯಕ ದಿನೇಶ್ ಕಾರ್ತಿಕ್[52] ಹಾಗೂ ಕೊನೆಯಲ್ಲಿ ಸ್ಫೋಟಕ ಆಟವಾಡಿದ ಆ್ಯಂಡ್ರೆ ರಸೆಲ್ ಆಸರೆಯಾದರು.
ರಾಜಸ್ಥಾನ ರಾಯಲ್ಸ್ ಪರ ಕೆ. ಗೌತಮ್, ಆರ್ಚರ್ ಹಾಗೂ ಬೆನ್ ಲಾಫ್ಲಿನ್ ತಲಾ 2 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.

ಸ್ಕೋರ್:
KKR: 169/7
[ದಿನೇಶ್ ಕಾರ್ತಿಕ್: 52, ಗೌತಮ್: 15/2]
RR 144/4
(ಸ್ಮಾಮ್ಸ್'ನ್ 50, ರಹಾನೆ 46,  ಚಾವ್ಲಾ 24/2, ಪ್ರಸಿದ್ಧ ಕೃಷ್ಣ 28/1)

ಫಲಿತಾಂಶ: ಕೆಕೆಆರ್'ಗೆ 25 ರನ್ ಜಯ

ಕ್ವಾಲಿಫೈಯರ್ 2ನೇ ಪಂದ್ಯ : ಮೇ.25, ಹೈದರಾಬಾದ್ vs ಕೋಲ್ಕತ್ತಾ

 

Follow Us:
Download App:
  • android
  • ios