ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಬಿನ್ ಉತ್ತಪ್ಪ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಕೋಲ್ಕತಾ(ಏ.15): ಕನ್ನಡಿಗರಾದ ರಾಬಿನ್ ಉತ್ತಪ್ಪ ಹಾಗೂ ಮನೀಷ್ ಪಾಂಡೆಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ತಂಡ ಹಾಲಿ ಚಾಂಪಿಯನ್ ಸೈನ್'ರೈಸರ್ಸ್ ಹೈದರಾಬಾದ್ ಮಣಿಸುವ ಮೂಲಕ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.

ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನೈಟ್'ರೈಡರ್ಸ್ ಪಡೆ ರಾಬಿನ್ ಉತ್ತಪ್ಪ ಅರ್ಧಶತಕ(68) ಹಾಗೂ ಮನಿಷ್ ಪಾಂಡೆ(46) ನೆರವಿನಿಂದ 172ರನ್ ಕಲೆಹಾಕಿತು.

ಸವಾಲಿನ ಗುರಿ ಬೆನ್ನತ್ತಿದ ಸನ್'ರೈಸರ್ಸ್ ಹೈದರಾಬಾದ್ ತಂಡ 20 ಓವರ್'ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಕೇವಲ 155ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ನೈಟ್'ರೈಡರ್ಸ್ 17ರನ್'ಗಳ ಅಂತರದ ವಿಜಯ ಸಾಧಿಸಿತು. ಈ ಗೆಲುವಿನ ಮೂಲಕ ಕೋಲ್ಕತಾ ಮೈದಾನದಲ್ಲಿ ನೈಟ್'ರೈಡರ್ಸ್ ಪಡೆ ತಾನಾಡಿದ 5 ಪಂದ್ಯಗಳಲ್ಲೂ ಹೈದರಾಬಾದ್ ತಂಡವನ್ನು ಮಣಿಸಿ ದಾಖಲೆ ಬರೆಯಿತು.

ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಬಿನ್ ಉತ್ತಪ್ಪ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.