ವೈಜಾಕ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಮೊದಲ ದಿನದಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 317 ರನ್ ಕಲೆಹಾಕಿದೆ. 22 ರನ್ ಆಗುವಷ್ಟರಲ್ಲಿ  ಓಪನ್​​ಗಳಿಬ್ಬರು ಔಟಾದ್ರು. ಅಲ್ಲಿಂದ ಕೂಡಿಕೊಂಡ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ 226 ರನ್​ಗಳ ಜೊತೆಯಾಟವಾಡಿದ್ರು. ಪೂಜಾರ ಟೆಸ್ಟ್​ ಕ್ರಿಕೆಟ್​ನಲ್ಲಿ 10ನೇ ಶತಕ ಬಾರಿಸಿದ್ರು. ಇದು ಅವರಿಗೆ ಹ್ಯಾಟ್ರಿಕ್ ಸೆಂಚುರಿಯಾಯ್ತು. 50ನೇ ಟೆಸ್ಟ್​ ಆಡುತ್ತಿರುವ ಕೊಹ್ಲಿ 14ನೇ ಶತಕ ಸಿಡಿಸಿ ಸಂಭ್ರಮಿಸಿದ್ರು. ರಹಾನೆ 23 ರನ್ ಗಳಿಸಿ ಔಟಾದ್ರು. ವಿರಾಟ್​ 151 ರನ್​ಗಳೊಂದಿಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜೇಮ್ಸ್ ಆಂಡರ್​ಸನ್ 3 ವಿಕೆಟ್ ಪಡೆದ್ರು.

ಸ್ಕೋರ್

ಭಾರತ : 317/4

ವಿರಾಟ್ ಕೊಹ್ಲಿ ಅಜೇಯ 151

ಚೇತೇಶ್ವ ಪೂಜಾರ 119

-

ಜೇಮ್ಸ್ ಆ್ಯಂಡರ್'ಸನ್  44/3