ಕೊಹ್ಲಿಯಿಂದ ಮತ್ತೊಂದು ವಿಶ್ವದಾಖಲೆ
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ನಾಯಕನಾಗಿ ಕೇವಲ 36 ಇನ್ನಿಂಗ್ಸ್ನಲ್ಲಿ ಎರಡು ಸಾವಿರ ರನ್ ಹೊಡೆದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ದಾಖಲೆ ಮಾಡಿದ್ದಾರೆ. ಇದಕ್ಕೂ ಮುನ್ನ ಆಫ್ರಿಕಾದ ಡಿವಿಲಿಯರ್ಸ್ ನಾಯಕರಾಗಿ 41 ಇನ್ನಿಂಗ್ಸ್ನಲ್ಲಿ 2 ಸಾವಿರ ರನ್ ಹೊಡೆದಿದ್ದರು.
