ವಿರಾಟ್​​​ ಕೊಹ್ಲಿ ಬ್ಯಾಟ್​​​ ಮಾಡಲು ಕ್ರೀಸ್​​'ಗೆ ಬಂದ್ರೆ ಎದುರಾಳಿ ಬೌಲರ್ಸ್​​​​​ ನಡಗುತ್ತಾರೆ. ಹೇಗಪ್ಪ ಇವನಿಗೆ ಬೌಲಿಂಗ್​ ಮಾಡೋದು ಅಂತ ಚಿಂತಿಸುತ್ತಾರೆ.  ಇದು ನೀವೆಲ್ಲಾ ಅಂದುಕೊಂಡಿರೋದಷ್ಟೆ ಅಸಲಿ ಕಹಾನಿ ಬೇರೆನೆ ಇದೆ.  ಕೊಹ್ಲಿಗೆ ಒಬ್ಬ ಬೌಲರ್​​ನನ್ನ ಕಂಡ್ರೆ ಇನ್ನಿಲ್ಲದ ಭಯ ಅಂತ. ಆತನನ್ನ ಫೇಸ್​​ ಮಾಡೋದು ಅಂದ್ರೆ ನರಕ ದರ್ಶನವಾಗಿದಂತಾಗುತ್ತಂತೆ.

ಟೀಂ ಇಂಡಿಯಾ ನಾಯಕ ವಿರಾಟ್​​​ ಕೊಹ್ಲಿ ಕ್ರೀಸ್​​ಗೆ ಬಂದ್ರೆ ಎದುರಾಳಿ ಬೌಲರ್​​​ ಎಷ್ಟೇ ಪ್ರಭಾವಿಯಾಗಿದ್ರೂ ಒಮ್ಮೆ ಬೆಚ್ಚಿ ಬೀಳ್ತಾನೆ. ಕಾರಣ ಸದ್ಯ ವಿಶ್ವ ಕ್ರಿಕೆಟ್​​​​​ನ ನಂಬರ್​​ 1 ಬ್ಯಾಟ್ಸ್​​​ಮನ್​ ಆಗಿರುವ ಕೊಹ್ಲಿ ವಿಶ್ವದ ಘಟಾನುಘಟಿ ಬೌಲರ್​​ಗಳನ್ನೂ ಇನ್ನಿಲ್ಲದಂತೆ ದಂಡಿಸಿದ್ದಾರೆ. ಪಂದ್ಯದ ನಂತರ ಕನಸಿನಲ್ಲೂ ಹೋಗಿ ಕಾಡಿದ್ದಾರೆ.

ಕೊಹ್ಲಿಯನ್ನ ಬೆದರಿಸಿದ ಬೌಲರ್​​​ ಇಲ್ಲ ಅಂದುಕೊಳ್ಳಬೇಡಿ..!: ನಾಯಕನನ್ನ ಕನಸಿನಲ್ಲೂ ಕಾಡಿದ್ದಾನಂತೆ ಪಾಕ್​ ಬೌಲರ್​​​

ಕೊಹ್ಲಿ ಎಷ್ಟೋ ಘಟಾನುಘಟಿ ಬೌಲರ್​​ಗಳನ್ನ ಮನಬಂದಂತೆ ದಂಡಿಸಿದ್ರೂ ಪಾಕ್'​ನ ಒಬ್ಬ ಬೌಲರ್​​​'ನನ್ನ ಕಂಡ್ರೆ ಭಯವಂತೆ. ಅವನ ಬೌಲಿಂಗ್​​​'ನಲ್ಲಿ ಬ್ಯಾಟ್​​​ ಮಾಡೋದು ಅಂದ್ರೆ ಕಷ್ಟಸಾಧ್ಯವಂತೆ. ಯಾವ ಬೌಲರ್​​​​​ ಅವರನ್ನ ಇನ್ನಿಲ್ಲದಂತೆ ಕಾಡಿದ್ದಾರೆ ಅನ್ನೋದನ್ನ ಸ್ವತಃ ಕೊಹ್ಲಿಯೇ ಹೇಳಿಕೊಂಡಿದ್ದಾರೆ.

ವಿರಾಟ್​​​ ಇದೂವರೆಗೂ ಎದುರಿಸಿದ ಬೌಲರ್​​ಗಳಲ್ಲಿ ಅತೀ ಕಷ್ಟದ ಬೌಲರ್​​ ಅಂದ್ರೆ ಅದು ಮೊಹಮ್ಮದ್​​​ ಆಮೀರ್​​​​ ಅಂತೆ. ಇಂತಹ ಒಂದು ಸ್ಫೋಟಕ ಮಾಹಿತಿಯನ್ನ ವಿರಾಟ್​​​ ಕೊಹ್ಲಿ ಮೊನ್ನೆ ಬಾಲಿವುಡ್​​ ಕಿಂಗ್​​ ಅಮೀರ್​​​​ ಖಾನ್​ ಜೊತೆ ನಡೆದ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಖಾಸಗಿ ಚಾನಲ್​​ನ ಸಂದರ್ಶನದಲ್ಲಿ ಅಮೀರ್​​​ ಖಾನ್​ ಮತ್ತು ಕೊಹ್ಲಿ ಒಟ್ಟಿಗೆ ಭಾಗವಹಿಸಿದ್ರು. ಈ ವೇಳೆ ಟೀಂ ಇಂಡಿಯಾ ನಾಯಕ ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಡೆಡ್ಲಿ ಸೀಕ್ರೇಟ್​​ಗಳನ್ನ ಬಿಚ್ಚಿಟ್ಟಿದ್ದಾರೆ.

ಕೊಹ್ಲಿ ಎಜುಕೇಶನ್ ಏನು..?

ಸದ್ಯ ತನ್ನ ಬ್ಯಾಟ್​​​​​​'ನಿಂದ ಇಡೀ ದೇಶವನ್ನೇ ಆಳುತ್ತಿರುವ ಕೊಹ್ಲಿ ಎಲ್ಲಿವರೆಗೆ ಓದಿದ್ದಾರೆ ಬ ಪ್ರಶನೆ ಈವರೆಗೂ ನಿಗೂಢವಾಗಿತ್ತು. ಆದರೀಗ ಪ್ರಶ್ನೆಗೆ ಖುದ್ದು ಕೊಹ್ಲಿಯೇ ಉತ್ತರಿಸಿದ್ದಾರೆ. ಹೌದು ಸಂದರ್ಶನದಲ್ಲಿ ತನ್ನ ಜುಕೇಶನ್ ಬಗ್ಗೆ ಮಾತನಾಡಿರುವ ಕೊಹ್ಲಿ ತಾನು ಪ್ರಥಮ ಪಿಯುಸಿಯವರೆಗಷ್ಟೇ ಓದಿರುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಒಂದು ವಿಶೇಷ ಸಂದರ್ಶನವೊಂದರಲ್ಲಿ ಅಪರೂಪ ಕ್ಷಣಗಳು ದಾಖಲಾದ್ವು. ಅಷ್ಟೇ ಅಲ್ಲ ಟೀಂ ಇಂಡಿಯಾ ನಾಯಕನ ಬಿಗ್​ ಸಿಕ್ರೇಟ್​​ಗಳು ದಾಖಲಾದ್ವು. ಇನ್ನೂ ಹತ್ತು ಹಲವು ಕೊಹ್ಲಿ ಸಿಕ್ರೇಟ್​​'ಗಳನ್ನ ನಾವು ರಿವೀಲ್​ ಮಾಡಲಿದ್ದೆವೆ ಮುಂದಿನ ದಿನಗಳಲ್ಲಿ ಜಸ್ಟ್​​​ ವೇಟ್​​ ಮಾಡಿ.