`ಭಾರತದ ನಾಯಕ 2016ರಲ್ಲಿ ಕೇವಲ 10 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೂ ಈಗಲೂ ಆತ 50 ಓವರ್`ಗಳ ಆಟದಲ್ಲಿ ಅತ್ಯುತ್ತಮನೇ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮೆಲ್ಬೋರ್ನ್(ಡಿ.27): ಐಸಿಸಿ ವಾರ್ಷಿಕ ಏಕದಿನ ತಂಡದ ನಾಯಕನಾಗಿ ಆಯ್ಕೆಯಾದ ಬಳಿಕ ಭಾರತದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಮತ್ತೊಂದು ಪಟ್ಟ ಸಿಕ್ಕಿದೆ. ಕ್ರಿಕೆಟ್ ಆಸ್ಟ್ರೇಲಿಯಾ ವಾರ್ಷಿಕ ಏಕದಿನ ತಂಡಕ್ಕೆ ನಾಯಕನ ಪಟ್ಟ ಕೊಹ್ಲಿಗೆ ಒಲಿದಿದೆ. ಕೊಹ್ಲಿ ನಾಯಕತ್ವದ ಈ ತಂಡದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾಗೂ ಸ್ಥಾನ ಸಿಕ್ಕಿದೆ.

`ಭಾರತದ ನಾಯಕ 2016ರಲ್ಲಿ ಕೇವಲ 10 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೂ ಈಗಲೂ ಆತ 50 ಓವರ್`ಗಳ ಆಟದಲ್ಲಿ ಅತ್ಯುತ್ತಮನೇ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 `10 ಪಂದ್ಯಗಳ ಪೈಕಿ 8ರಲ್ಲಿ ಕೊಹ್ಲಿ 45ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಜನವರಿಯಲ್ಲಿ ಆಸೀಸ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದಾರೆ. ಅಜೇಯ 154 ರನ್ ಜೊತೆಗೆ ನ್ಯೂಜಿಲೆಂಡ್ 289 ರನ್ ಸಿಡಿಸಿದ್ಧಾರೆ. 59 ಚೇಸಿಂಗ್`ನಲ್ಲಿ ಕೊಹ್ಲಿ 90.10ರಷ್ಟು ಸರಾಸರಿ ಹೊಂದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಕೊಹ್ಲಿ ಆಟವನ್ನ ಶ್ಲಾಗಿಸಿದೆ.

 ಕ್ರಿಕೆಟ್ ಆಸ್ಟ್ರೇಲಿಯಾ ವಾರ್ಷಿಕ ಏಕದಿನ ತಂಡ ಇಂತಿದೆ: ವಿರಾಟ್ ಕೊಹ್ಲಿ(ಕ್ಯಾಪ್ಟನ್), ಡೇವಿಡ್ ವಾರ್ನರ್, ಕ್ವಿಂಟನ್ ಡಿ ಕಾಕ್, ಸ್ಟಿವ್ ಸ್ಮಿತ್, ಬಾಬರ್ ಅಜಮ್, ಮಿಷೆಲ್ ಮಾರ್ಷ್, ಜೋಸ್ ಬಟ್ಲರ್, ಜಸ್ಪ್ರೀತ್ ಬುಮ್ರಾ, ಇಮ್ರಾನ್ ತಾಹಿರ್