ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ಮೊದಲ ಬಾರಿಗೆ ಭಾರತದಲ್ಲಿ ಅತಿ ಸಕ್ರಿಯ ಸೆಲೆಬ್ರೆಟಿಗಳ ಪಟ್ಟಿಪ್ರಕಟಿಸಿದ್ದು, ಈ ಪಟ್ಟಿಯಲ್ಲಿ 1.98 ಕೋಟಿ ಹಿಂಬಾಲಕರನ್ನು ಹೊಂದಿರುವ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

ನವದೆಹಲಿ: ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ಮೊದಲ ಬಾರಿಗೆ ಭಾರತದಲ್ಲಿ ಅತಿ ಸಕ್ರಿಯ ಸೆಲೆಬ್ರೆಟಿಗಳ ಪಟ್ಟಿಪ್ರಕಟಿಸಿದ್ದು, ಈ ಪಟ್ಟಿಯಲ್ಲಿ 1.98 ಕೋಟಿ ಹಿಂಬಾಲಕರನ್ನು ಹೊಂದಿರುವ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್‌ ಕೊಹ್ಲಿ ಅತ್ಯಂತ ಸಕ್ರಿಯ ಖಾತೆ ನಿರ್ವಹಿಸುತ್ತಿದ್ದು, 2017ರಲ್ಲಿ ಅವರು ಪ್ರಕಟಿಸಿದ ಫೋಟೋಗಳಿಗೆ ಅತಿ ಹೆಚ್ಚು ಮೆಚ್ಚುಗೆ ಮತ್ತು ಕಮೆಂಟ್‌ಗಳು ವ್ಯಕ್ತವಾಗಿವೆ.

ನಂತರದ ಸ್ಥಾನದಲ್ಲಿರುವ ನಟಿ ದೀಪಿಕಾ ಪಡುಕೋಣೆ 2.24 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಪ್ರಿಯಾಂಕಾ ಚೋಪ್ರಾ 2.2 ಕೋಟಿ ಹಿಂಬಾಲಕರೊಂದಿಗೆ 3ನೇ ಸ್ಥಾನ ಪಡೆದಿದ್ದರೆ, 2.08 ಕೋಟಿ ಹಿಂಬಾಲಕರೊಂದಿಗೆ ನಟಿ ಆಲಿಯಾ ಭಟ್‌ ನಂತರದ ಸ್ಥಾನದಲ್ಲಿದ್ದಾರೆ.

ಇನ್ನು ಯುವ ನಟ ಇಶಾನ್‌ ಖಟ್ಟರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ವೇಗವಾಗಿ ಅಭಿಮಾನಿಗಳನ್ನು ಗಳಿಸೊಳ್ಳುತ್ತಿರುವ ಸೆಲೆಬ್ರೆಟಿಯಾಗಿ ಹೊರಹೊಮ್ಮಿದ್ದಾರೆ.