ನವದೆಹಲಿ(ಅ.19):ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ  ಕುರಿತ, ಡ್ರೈವೆನ್ ದಿ ವಿರಾಟ್ ಕೊಹ್ಲಿ ಸ್ಟೋರಿ'  ಪುಸ್ತಕ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ವಿಜಯ್ ಲೋಕಪಲ್ಲಿ ಬರೆದಿರುವ ಈ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾರತ ತಂಡದ ಮಾಜಿ ನಾಯಕರಾದ ಕಪಿಲ್ ದೇವ್, ರವಿಶಾಸ್ತ್ರಿ, ಕೋಚ್ ಅನಿಲ್ ಕುಂಬ್ಳೆ, ಕೊಹ್ಲಿ ಅವರ ತರಬೇತುದಾರ ರಾಜ್ ಕುಮಾರ್ ಶರ್ಮ, ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಅಜಯ್ ಜಡೇಜ, ಮುರುಳಿ ಕಾರ್ತೀಕ್, ಆಶಿಶ್ ನೆಹ್ರಾ ಮೊದಲಾದವರು ಪಾಲ್ಗೊಂಡಿದ್ದರು. ಕ್ರಿಕೆಟ್ ದಿಗ್ಗಜರ ಸಮ್ಮುಖದಲ್ಲಿ 'ಪುಸ್ತಕ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಕೃತಿ ಬರೆದಿರುವ ಹಿರಿಯ ಪತ್ರಕರ್ತ ವಿಜಯ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.