ಆಲ್ರೌಂಡರ್ ವಿಭಾಗದಲ್ಲಿ ಶಕೀಬ್ ಅಲ್ ಹಸನ್ ಅಗ್ರ ಸ್ಥಾನ ಪಡೆದರೆ, ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಆಸೀಸ್ ವೇಗಿ ಜೋಸ್ ಹ್ಯಾಜಲ್'ವುಡ್ ಪಾಲಾಗಿದೆ.

ದುಬೈ(ಜು.11): ನೂತನವಾಗಿ ಬಿಡುಗಡೆಯಾಗಿರುವ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌'ಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

ಇದೇ ವೇಳೆ ಎಂ.ಎಸ್.ಧೋನಿ 3 ಸ್ಥಾನಗಳ ಏರಿಕೆ ಕಂಡಿದ್ದು, 12ನೇ ಸ್ಥಾನ ಪಡೆದಿದ್ದಾರೆ.

ಹಲವು ಸ್ಥಾನಗಳು ಬದಲಾಗಿದ್ದರೂ, ಅಗ್ರ ಐವರು ಬ್ಯಾಟ್ಸ್‌'ಮನ್‌'ಗಳು, ಬೌಲರ್'ಗಳು ಹಾಗೂ ಆಲ್ರೌಂಡರ್‌'ಗಳ ಸ್ಥಾನ ಬದಲಾಗಿಲ್ಲ.

ವಿಂಡಿಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ವಾರ್ನರ್, ಎಬಿ ಡಿವಿಲಿಯರ್ಸ್, ರೂಟ್ ಹಾಗೂ ಬಾಬರ್ ಆಜಮ್ ಕ್ರಮವಾಗಿ ಉಳಿದ ಟಾಪ್ 5 ಸ್ಥಾನದಲ್ಲಿದ್ದಾರೆ. ಇನ್ನು ವೆಸ್ಟ್'ಇಂಡಿಸ್ ವಿರುದ್ಧದ ಸರಣಿಯಲ್ಲಿ 336 ರನ್ ಗಳಿಸಿದ ರಹಾನೆ, 13 ಸ್ಥಾನಗಳ ಏರಿಕೆ ಕಂಡಿದ್ದು, 23ನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಭಾರತದ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದ ಶೈ ಹೋಪ್ 20 ಸ್ಥಾನ ಏರಿಕೆ ಕಂಡಿದ್ದು 61ನೇ ಸ್ಥಾನದಲ್ಲಿದ್ದಾರೆ.

ಟಾಪ್ 10 ಬೌಲರ್‌'ಗಳ ಪಟ್ಟಿಯಲ್ಲಿ ಭಾರತದ ಯಾವೊಬ್ಬ ಆಟಗಾರನೂ ಸಹ ಸ್ಥಾನ ಪಡೆದಿಲ್ಲ. ಭುವನೇಶ್ವರ್ ಕುಮಾರ್ 13ನೇ ಸ್ಥಾನದಲ್ಲಿದ್ದರೆ, ಅಶ್ವಿನ್ 20ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಆಲ್ರೌಂಡರ್ ವಿಭಾಗದಲ್ಲಿ ಶಕೀಬ್ ಅಲ್ ಹಸನ್ ಅಗ್ರ ಸ್ಥಾನ ಪಡೆದರೆ, ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಆಸೀಸ್ ವೇಗಿ ಜೋಸ್ ಹ್ಯಾಜಲ್'ವುಡ್ ಪಾಲಾಗಿದೆ.