‘ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದಾಗ ಆಗುವ ಸಂತೋಷವನ್ನು ಬಣ್ಣಿಸಲು ಸಾಧ್ಯವಿಲ್ಲ. ಟೆಸ್ಟ್‌ ಮಾದರಿ ಎಷ್ಟು ಕಠಿಣವಾದದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಕ್ರಿಕೆಟ್‌ನ ಅತಿ ಸುಂದರ ಮಾದರಿ ಅದು. ಯಾವುದೇ ಕಾರಣಕ್ಕೂ ಪಂದ್ಯವನ್ನು 4 ದಿನಗಳಿಗೆ ಸೀಮಿತಗೊಳಿಸಬಾರದು’ ಎಂದು ಕೊಹ್ಲಿ ಹೇಳಿದ್ದಾರೆ.

ನವದೆಹಲಿ[ಸೆ.26]: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಗತ್ಯ ಪ್ರಯೋಗಗಳನ್ನು ಮಾಡಬಾರದು ಎಂದಿದ್ದಾರೆ. ಜತೆಗೆ ಟೆಸ್ಟ್‌ ಪಂದ್ಯವನ್ನು ಸಾಂಪ್ರದಾಯಿಕ 5 ದಿನಗಳಿಂದ 4 ದಿನಗಳಿಗೆ ಇಳಿಸುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. 

‘ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದಾಗ ಆಗುವ ಸಂತೋಷವನ್ನು ಬಣ್ಣಿಸಲು ಸಾಧ್ಯವಿಲ್ಲ. ಟೆಸ್ಟ್‌ ಮಾದರಿ ಎಷ್ಟು ಕಠಿಣವಾದದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಕ್ರಿಕೆಟ್‌ನ ಅತಿ ಸುಂದರ ಮಾದರಿ ಅದು. ಯಾವುದೇ ಕಾರಣಕ್ಕೂ ಪಂದ್ಯವನ್ನು 4 ದಿನಗಳಿಗೆ ಸೀಮಿತಗೊಳಿಸಬಾರದು’ ಎಂದು ಕೊಹ್ಲಿ ಹೇಳಿದ್ದಾರೆ. ಇದೇ ವೇಳೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ವಿರಾಟ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟೆಸ್ಟ್‌ ಕ್ರಿಕೆಟ್‌ ಜನಪ್ರಿಯತೆ ಹೆಚ್ಚಲಿದೆ ಎಂದು ಅಭಿಪ್ರಾಯಿಸಿದ್ದಾರೆ.

ಎಂ.ಎಸ್ ಧೋನಿಯವರಿಂದ ನಾನು ನಾಯಕತ್ವದ ಗುಣಗಳನ್ನು ಕಲಿತಿರುವೆ ಎಂದಿರುವ ಕೊಹ್ಲಿ, ಸ್ಲಿಪ್’ನಲ್ಲಿ ಧೋನಿ ಸಮೀಪ ನಿಂತು ಅವರು ತೆಗೆದುಕೊಳ್ಳುವ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ ಎಂದು ಹೇಳಿದ್ದಾರೆ.