ಓವಲ್(ಸೆ.09): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಭಾರತ ಹಿನ್ನಡೆ ಅನುಭವಿಸಿದೆ ನಿಜ. ಆದರೆ ಸರಣಿಯಲ್ಲಿ ಹಲವು ದಾಖಲೆ ಬರೆಯುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇದೀಗ ಕನ್ನಡಿಗ ಕೆಎಲ್ ರಾಹುಲ್ ಗರಿಷ್ಠ ಕ್ಯಾಚ್ ಹಿಡಿಯೋ ಮೂಲಕ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 13 ಕ್ಯಾಚ್ ಹಿಡಿಯುವ ಮೂಲಕ ಕೆ. ಎಲ್. ರಾಹುಲ್, ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ದಾಖಲೆಯನ್ನು
ಸರಿಗಟ್ಟಿದ್ದಾರೆ.  ದ್ರಾವಿಡ್ 2004ರ ಆಸ್ಟ್ರೇಲಿಯಾ ಸರಣಿಯಲ್ಲಿ 13 ಕ್ಯಾಚ್ ಹಿಡಿದಿದ್ದರು. 

1972-73ರಲ್ಲಿ ಭಾರತದ ಮಾಜಿ ಆಲ್ರೌಂಡರ್ ಏಕ್‌ನಾಥ್  ಸೋಲ್ಕರ್ ಇಂಗ್ಲೆಂಡ್ ವಿರುದ್ಧ ದ ಟೆಸ್ಟ್ ಸರಣಿಯಲ್ಲಿ 12 ಕ್ಯಾಚ್ ಹಿಡಿದಿದ್ದರು. ಇದೀಗ ರಾಹುಲ್, ಸೋಲ್ಕಾರ್‌ರನ್ನು ಹಿಂದಿಕ್ಕಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಕ್ಷೇತ್ರರಕ್ಷಕರಲ್ಲಿ ದ್ರಾವಿಡ್ ಮೊದಲ ಮತ್ತು ರಾಹುಲ್ 2ನೇ ಸ್ಥಾನದಲ್ಲಿದ್ದಾರೆ.