ನಟಿ ನಿಧಿ ಅಗರ್ವಾಲ್ ಜೊತೆಗೆ ಕ್ರಿಕೆಟಿಗ ಕೆಎಲ್ ರಾಹುಲ್ ಸುತ್ತಾಟ

KL Rahul Spotted With Bollywood Actress Nidhhi Agerwal in Mumbai
Highlights

ಟೀಮ್ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್, ಬಾಲಿವುಡ್ ನಟಿ ನಿಧಿ ಅಗರ್ವಾಲ್ ಜೊತೆ ಮುಂಬೈನ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂಬೈ(ಮೇ.31) ಐಪಿಎಲ್ ಮುಗಿಸಿ ವಿಶ್ರಾಂತಿಗೆ ಜಾರಿರುವ ಟೀಮ್ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್, ಇದೀಗ ಮುಂಬೈನಲ್ಲಿ ಬಾಲಿವುಡ್ ನಟಿ ನಿಧಿ ಅಗರ್ವಾಲ್ ಜೊತೆ ಕಾಣಿಸಿಕೊಂಡಿದ್ದಾರೆ. ಮುಂಬೈನ ಖಾಸಗಿ ರೆಸ್ಟೋರೆಂಟ್ ಒಂದರಲ್ಲಿ ರಾಹುಲ್ ಹಾಗು ನಿಧಿ ಪ್ರತ್ಯಕ್ಷವಾಗಿದ್ದಾರೆ. ಬಳಿಕ ಕಾರಿನಲ್ಲಿ ತೆರಳಿದ ಕನ್ನಡಿಗ ರಾಹುಲ್ ಹಾಗೂ ನಿಧಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿರುವ ಕೆಎಲ್ ರಾಹುಲ್ 14 ಪಂದ್ಯದಿಂದ 659 ರನ್ ಸಿಡಿಸಿದ್ದಾರೆ. ಕೇವಲ 14 ಎಸೆತದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿರುವ ರಾಹುಲ್ ಈ ಆವೃತ್ತಿಯಲ್ಲಿ 6 ಅರ್ಧಶತಕ ಬಾರಿಸಿದ್ದಾರೆ.  ಐಪಿಎಲ್ ಬಳಿಕ ಅಲ್ಪ ಸತತ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದ ರಾಹುಲ್, ಜೂನ್ 14 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಕಣಕ್ಕಿಳಿಯಲಿದ್ದಾರೆ.
 

loader