ಜೂ.7 ರಂದು ಕೊಹ್ಲಿಯ ಮುಖದ ಅಳತೆ, ಗಡ್ಡದ ಫೋಟೋಗಳನ್ನು ತೆಗೆಯುತ್ತಿ ರುವುದು, ಒಪ್ಪಂದಕ್ಕೆ ಸಹಿ ಹಾಕುತ್ತಿರುವ ಸಿಸಿಟೀವಿ ವಿಡಿಯೋವನ್ನು ರಾಹುಲ್ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದರು
ನವದೆಹಲಿ(ಜೂ.09): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗಡ್ಡಕ್ಕೂ ವಿಮೆ ಮಾಡಿಸಿದ್ದಾರಾ? ಹೀಗೊಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಹಬ್ಬಲು ಕಾರಣ,
ಕೊಹ್ಲಿಯ ಸಹ ಆಟಗಾರ ಕೆ.ಎಲ್.ರಾಹುಲ್. ಜೂ.7 ರಂದು ಕೊಹ್ಲಿಯ ಮುಖದ ಅಳತೆ, ಗಡ್ಡದ ಫೋಟೋಗಳನ್ನು ತೆಗೆಯುತ್ತಿ ರುವುದು, ಒಪ್ಪಂದಕ್ಕೆ ಸಹಿ ಹಾಕುತ್ತಿರುವ ಸಿಸಿಟೀವಿ ವಿಡಿಯೋವನ್ನು ರಾಹುಲ್ ಟ್ವೀಟರ್‌ನಲ್ಲಿ ಹಾಕಿ 'ನಿಮ್ಮ ಗಡ್ಡದ ಪ್ರೀತಿ ಗೊತ್ತಿದೆ. ಆದರೆ ಗಡ್ಡಕ್ಕೆ ವಿಮೆ ಮಾಡಿಸಿದ್ದೀರಿ ಎನ್ನುವ ನನ್ನ ಊಹೆ ಈ ವಿಡಿಯೋದಿಂದ ದೃಢಪಡುತ್ತಿದೆ' ಎಂದು ಬರೆದಿದ್ದಾರೆ.
