ಪಾಕ್ ಆಟಗಾರನ ದಾಖಲೆ ಬದಿಗೆ ಸರಿಸಿದ ಕನ್ನಡಿಗ ರಾಹುಲ್

KL Rahul Pips Babar Azam To Create Another T20I record
Highlights

ಶತಕ ದಾಖಲಿಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20ಯಲ್ಲಿ ಗೆಲುವು ತಂದುಕೊಟ್ಟ ಕನ್ನಡಿಗ ಕೆ.ಎಲ್ ರಾಹುಲ್ ಒಂದಿಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಟಿ-20ಯಲ್ಲಿ ರಾಹುಲ್ ಮಾಡಿದ ಹೊಸ ಸಾಧನೆಗಳು ಏನು? ನೀವೇ ನೋಡಿಕೊಂಡು ಬನ್ನಿ..

ಮ್ಯಾಂಚೆಸ್ಟರ್ [ಜು.4]  ಇಂಗ್ಲೆಂಡ್ ನೀಡಿದ ಗುರಿ ಬೆನ್ನು ಹತ್ತಿದ ಭಾರತ ಎಂಟು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತ್ತು. ವಿರಾಟ್ ಕೊಹ್ಲಿ ತಮ್ಮ 3 ನೇ ಕ್ರಮಾಂಕ ತ್ಯಜಿಸಿ ರಾಹುಲ್ ಗೆ ಬಿಟ್ಟು ಕೊಟ್ಟಿದ್ದರು. ಅದಕ್ಕೆ ತಕ್ಕುದಾದ ಆಟ ಕೂಡ ರಾಹುಲ್ ಅವರಿಂದ ದೊರೆಯಿತು.

ಶತಕ ದಾಖಲಿಸಿದ ರಾಹುಲ್ ಟಿ-20ಯಲ್ಲಿ ಎರಡು ದ್ವಿಶತಕ ಸಾಧನೆ ಮಾಡಿದ ರೋಹಿತ್ ಶರ್ಮಾ ಅವರೊಂದಿಗೆ ಸೇರಿಕೊಂಡರು. ಈ ಹಿಂದೆ ರಾಹುಲ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 110 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು.

ಸೆಂಚುರಿ ಸಿಡಿಸಿದ ಬಳಿಕ ಕೆಎಲ್ ರಾಹುಲ್ ಸೆಲೆಬ್ರೇಷನ್ ಸ್ಟೈಲ್ ಸೀಕ್ರೆಟ್ ಎನು?

ಪಾಕಿಸ್ತಾನದ ಬಾಬರ್ ಅಜಮ್ ದಾಖಲೆ ಪುಡಿ
ಟಿ-20 ವಿಭಾಗದಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿದ ದಾಖಲೆಯೂ ರಾಹುಲ್ ಪಾಲಾಯಿತು. ಪಾಕಿಸ್ತಾನದ ಬಾಬರ್ ಅಜಮ್ ಸರಾಸರಿ 53 ಇದ್ದರೆ ಒಂದು ಹೆಜ್ಜೆ ಮುಂದೆ ಹೋದ ರಾಹುಲ್ ತಮ್ಮ ಸರಾಸರಿಯನ್ನು 55ಕ್ಕೆ ಏರಿಸಿಕೊಂಡರು.

loader