ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಸೆಂಚುರಿ ಸಿಡಿಸಸಿದ ಬಳಿಕ ತಮ್ಮ ಸಿಗ್ನೇಚರ್ ಸ್ಟೈಲ್ ಮೂಲಕ ಸಂಭ್ರಮಿಸಿದ್ದಾರೆ. ರಾಹುಲ್ ಸೆಲೆಬ್ರೇಷನ್ ಸ್ಟೈಲ್ ಸೀಕ್ರೆಟ್ ಏನು? ಈ ಕುರಿತು ಸ್ವತಃ ರಾಹುಲ್ ಮಾತನಾಡಿದ್ದಾರೆ, ನೋಡಿ.
ಓಲ್ಡ್ ಟ್ರಾಫೋರ್ಡ್(ಜು.04): ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟ ರಾಹುಲ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಸ್ಫೋಟಕ ಇನ್ನಿಂಗ್ಸ್ ಮೂಲಕ ರಾಹುಲ್ ಅಜೇಯ 101 ರನ್ ಸಿಡಿಸಿ ಮಿಂಚಿದರು.
ಕೆಎಲ್ ರಾಹುಲ್ ಸೆಂಚುರಿ ಬಾರಿಸುತ್ತಿದ್ದಂತೆ, ವಿಶೇಷ ರೀತಿಯಲ್ಲಿ ಸಂಭ್ರಮಿಸಿದರು. ರಾಹುಲ್ ತಮ್ಮ ಸಿಗ್ನೇಚರ ಸ್ಟೆಪ್ಸ್ ಹಾಕೋ ಮೂಲಕ ಮೈದಾನದಲ್ಲಿ ಶತಕ ಸಂಭ್ರಮ ಆಚರಿಸಿದರು. ಇದೀಗ ರಾಹುಲ್ ಈ ಸಿಗ್ನೇಚರ್ ಸ್ಟೈಲ್ ಕುರಿತ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ದಿನೇಶ್ ಕಾರ್ತಿಕ್ ಹಾಗೂ ಕೆಎಲ್ ರಾಹುಲ್ ಬಿಸಿಸಿಐ ಟಿವಿಗೆ ನಡೆಸಿದ ಸಂದರ್ಶನದಲ್ಲಿ ರಾಹುಲ್ ತಮ್ಮ ಸಿಗ್ನೇಚರ್ ಸ್ಟೈಲ್ ಮಾಡಿ ತೋರಿಸಿದ್ದಾರೆ. ರಾಹುಲ್ ಶತಕದ ನೆರವಿನಿಂದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ
