ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ವೇಳೆ ರಾಹುಲ್ ಭುಜದ ನೋವಿಗೆ ತುತ್ತಾಗಿದ್ದರು. ಆದ್ರೂ ನೋವಿನಲ್ಲೇ ಟೆಸ್ಟ್ಗಳನ್ನಾಡಿದ್ದ ರಾಹುಲ್, 7 ಇನ್ನಿಂಗ್ಸ್ಗಳಿಂದ 6 ಅರ್ಧಶತಕ ಬಾರಿಸಿದ್ದರು.
ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಭುಜದ ನೋವಿನಿಂದ ಬಳಲುತ್ತಿರುವ ರಾಹುಲ್ 10ನೆ ಆವೃತ್ತಿ ಐಪಿಎಲ್ ಆಡುವುದಿಲ್ಲ ಅಂತ ಆರ್ಸಿಬಿ ಮೂಲಗಳು ಖಚಿತಪಡಿಸಿವೆ. ಶೀಘ್ರವೇ ರಾಹುಲ್ ಲಂಡನ್ಗೆ ಪ್ರಯಾಣ ಬೆಳಸಲಿದ್ದು, ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಅವರು ಮುಂದಿನ ಎರಡು ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ. ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ವೇಳೆ ರಾಹುಲ್ ಭುಜದ ನೋವಿಗೆ ತುತ್ತಾಗಿದ್ದರು. ಆದ್ರೂ ನೋವಿನಲ್ಲೇ ಟೆಸ್ಟ್ಗಳನ್ನಾಡಿದ್ದ ರಾಹುಲ್, 7 ಇನ್ನಿಂಗ್ಸ್ಗಳಿಂದ 6 ಅರ್ಧಶತಕ ಬಾರಿಸಿದ್ದರು. ಈಗ ಆ ನೋವು ಉಲ್ಬಣಗೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲೇಬೇಕಿದೆ. ಜೂನ್ನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ವೇಳೆಗೆ ರಾಹುಲ್ ಫಿಟ್ ಆಗುವ ಸಾಧ್ಯತೆ ಇದೆ.
