3ನೇ ಏಕದಿನದಿಂದ ರಾಹುಲ್‌ಗೆ ಕೊಕ್-ಮಾಜಿ ಕ್ರಿಕೆಟಿಗರ ಪ್ರತಿಕ್ರಿಯೆ ಹೇಗಿದೆ?

KL Rahul Left Out Of India vs England 3rd ODI Former cricketers Slam Decision
Highlights

ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಿಂದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್‌ಗೆ ಗೇಟ್ ಪಾಸ್ ನೀಡಿರೋದಕ್ಕೆ ಆಕ್ರೋಷ ವ್ಯಕ್ತವಾಗಿದೆ. ಹಲವು ಮಾಜಿ ಕ್ರಿಕೆಟಿಗರು ಕೂಡ ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ. ಮಾಜಿ ಕ್ರಿಕೆಟಿಗರ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ

ಲೀಡ್ಸ್(ಜು.17): ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಿಂದ ಕೆಎಲ್ ರಾಹುಲ್‌ಗೆ ಗೇಟ್ ಪಾಸನ್ ನೀಡಲಾಗಿದೆ. ಕನ್ನಡಿಗ ರಾಹುಲ್ ಬದಲು, ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಲಾಗಿದೆ. ಆದರೆ ಟೀಂ ಇಂಡಿಯಾದ ಈ ನಿರ್ಧಾರಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಟೀಂ ಇಂಡಿಯಾ ನಿರ್ಧಾರವನ್ನ ಟೀಕಿಸಿದ್ದಾರೆ. ಯುವ ಕ್ರಿಕೆಟಿಗ ರಾಹುಲ್ ಕೈಬಿಟ್ಟದ್ದು ಸರಿಯಲ್ಲ ಎಂದು ಖಾಸಗಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

3ನೇ ಏಕದಿನದಿಂದ ಕೆಎಲ್ ರಾಹುಲ್‌ರನ್ನ ಕೈಬಿಟ್ಟಿರೋ ನಿರ್ಧಾರಕ್ಕೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಆಟಗಾರನನ್ನ ಕೈಬಿಟ್ಟಿರೋದು ಸೂಕ್ತ ನಿರ್ಧಾರವಲ್ಲ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

loader