ಕೆಎಲ್ ರಾಹುಲ್ ಯಾಕೋ ಮಂಕಾಗಿದ್ದಾರೆ. ಟೆಸ್ಟ್'ನಲ್ಲಿ ಅದ್ಭುತ ಪ್ರದರ್ಶನ ನೀಡುವ ರಾಹುಲ್, ಸೀಮಿತ ಓವರ್ಗಳಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗೆ ಆದರೆ ಅವರು ಒಂಡೇ-ಟಿ20 ತಂಡದಿಂದ ಕಿಕೌಟ್ ಆಗುವ ಸಾಧ್ಯತೆಗಳಿವೆ. ಇಂಗ್ಲೆಂಡ್ ವಿರುದ್ಧ ಉಳಿದ ಎರಡು ಮ್ಯಾಚ್ ಅವರಿಗೆ ಡು ಆರ್ ಡೈ.
ಬೆಂಗಳೂರು(ಜ.29): ಕೆಎಲ್ ರಾಹುಲ್ ಯಾಕೋ ಮಂಕಾಗಿದ್ದಾರೆ. ಟೆಸ್ಟ್'ನಲ್ಲಿ ಅದ್ಭುತ ಪ್ರದರ್ಶನ ನೀಡುವ ರಾಹುಲ್, ಸೀಮಿತ ಓವರ್ಗಳಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗೆ ಆದರೆ ಅವರು ಒಂಡೇ-ಟಿ20 ತಂಡದಿಂದ ಕಿಕೌಟ್ ಆಗುವ ಸಾಧ್ಯತೆಗಳಿವೆ. ಇಂಗ್ಲೆಂಡ್ ವಿರುದ್ಧ ಉಳಿದ ಎರಡು ಮ್ಯಾಚ್ ಅವರಿಗೆ ಡು ಆರ್ ಡೈ.
ಟೆಸ್ಟ್'ನಲ್ಲಿ ಅದ್ಭುತ ಪರ್ಫಮೆನ್ಸ್: ಸೀಮಿತ ಓವರ್ಗಳಲ್ಲಿ ನಡೆಯುತ್ತಿಲ್ಲ ಆಟ
ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್'ಗೆ ಸೀಮಿತವಾಗುತ್ತಾರಾ ಎನ್ನುವ ಪ್ರಶ್ನೆಗಳು ಎದ್ದಿವೆ. ಟೆಸ್ಟ್'ನಲ್ಲಿ ಅದ್ಭುತ ಪ್ರದರ್ಶನ ನೀಡುವ ರಾಹುಲ್, ಸೀಮಿತ ಓವರ್'ಗಳಲ್ಲಿ ಯಾಕೋ ಮಂಕಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ವಿಫಲರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಇಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತಿಲ್ಲ.
ಚೊಚ್ಚಲ ಏಕದಿನ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಮಾಡಿದ ವೀರ. ಮೂರು ಮಾದರಿ ಕ್ರಿಕೆಟ್'ನಲ್ಲಿ ಶತಕ ಬಾರಿಸಿರುವ ಕೆಲವೇ ಕೆಲ ಆಟಗಾರರಲ್ಲಿ ರಾಹುಲ್ ಸಹ ಒಬ್ಬರು. ಒಂದೇ ವರ್ಷದಲ್ಲಿ ಮೂರು ಮಾದರಿ ಕ್ರಿಕೆಟ್'ನಲ್ಲಿ ಸೆಂಚುರಿ ಬಾರಿಸಿದ ಆಟಗಾರ ರಾಹುಲ್.
ಸೀಮಿತ ಓವರ್'ಗಳ ಪಂದ್ಯದಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಅವರಿಗೆ ಇಂಗ್ಲೆಂಡ್ ವಿರುದ್ಧ ಚಾನ್ಸ್ ಕೊಡಲಾಯಿತು. ಆದರೆ 4 ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿದ್ದಾರೆ.
4 ಪಂದ್ಯ.. 32 ರನ್..
ಮೂರು ಒಂಡೇ ಮತ್ತು ಒಂದು ಟಿ20 ಪಂದ್ಯದಲ್ಲಿ ರಾಹುಲ್ ವಿಫಲರಾಗಿದ್ದಾರೆ. 8, 5 , 11 8 ರನ್ ಗಳಿಸಿ ಔಟಾಗಿದ್ದಾರೆ. ರನ್ ಗಳಿಸುವುದು ಒತ್ತಟ್ಟಿಗರಲಿ, ಕ್ರೀಸಿಗೆ ಕಚ್ಚಿ ನಿಲ್ಲಲು ಪರದಾಡುತ್ತಿದ್ದಾರೆ. ಇದು ಟೀಮ್ ಮ್ಯಾನೇಜ್'ಮೆಂಟ್ ದೊಡ್ಡ ತಲೆನೋವಾಗಿದೆ.
ಲಾಸ್ಟ್ ಚಾನ್ಸ್..!
ಇಂಗ್ಲೆಂಡ್ ವಿರುದ್ಧ ಉಳಿದ ಎರಡು ಟಿ20 ಮ್ಯಾಚ್ಗಳು ರಾಹುಲ್ ಪಾಲಿಗೆ ಡು ಆರ್ ಡೈ. ಈ ಎರಡು ಪಂದ್ಯದಲ್ಲಿ ಕ್ಲಿಕ್ ಆದರೆ ರಾಹುಲ್ ಸೀಮಿತ ಓವರ್'ಗಳ ತಂಡದಲ್ಲಿ ಮುಂದುವರೆಯುತ್ತಾರೆ. ಇಲ್ಲವಾದರೆ ಟೆಸ್ಟ್ ತಂಡಕ್ಕೆ ಸೀಮಿತವಾಗುತ್ತಾರೆ.
ಚಾಂಪಿಯನ್ಸ್ ಟ್ರೋಫಿ ಮಿಸ್ ಮಾಡಿಕೊಳ್ತಾರಾ..?
ಜೂನ್'ನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಓಪನರ್ಸ್ ನಡುವೆ ಫೈಟ್ ಬಿದ್ದಿದೆ. ರೋಹಿತ್ ಶರ್ಮಾಗೆ ಸ್ಥಾನ ಖಚಿತ. ಇನ್ನೆರಡು ಸ್ಥಾನಕ್ಕೆ ಶಿಖರ್ ಧವನ್, ಅಜಿಂಕ್ಯಾ ರಹಾನೆ ಮತ್ತು ರಾಹುಲ್ ನಡುವೆ ಫೈಟ್ ಇದೆ. ಆದರೆ ರಾಹುಲ್ ಪದೇಪದೇ ವಿಫಲರಾಗಿ ಸಿಕ್ಕ ಚಾನ್ಸ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಉಳಿದ ಎರಡು ಟಿ20 ಮ್ಯಾಚ್'ನಲ್ಲಿ ಫೇಲ್ ಆದರೆ ರಾಹುಲ್ ಇಂಗ್ಲೆಂಡ್ ಪ್ಲೈಟ್ ಮಿಸ್ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ರಾಹುಲ್ ವಿಫಲರಾಗುತ್ತಿದ್ದರೆ, ಮನೀಶ್ ಪಾಂಡೆಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಕರುಣ್ ನಾಯರ್ ಟೆಸ್ಟ್ಗೆ ಸೀಮಿತವಾಗಿದ್ದಾರೆ. ಹೀಗಾಗಿ ಕರ್ನಾಟಕದ ಆಟಗಾರರು ಕೇವಲ ಟೆಸ್ಟ್'ಗೆ ಸೀಮಿತವಾಗುತ್ತಿದ್ದಾರೆ. ಇನ್ನುಳಿದ ಎರಡು ಪಂದ್ಯದಲ್ಲಾದರೂ ರಾಹುಲ್ ಕಮಾಲ್ ಮಾಡಲಿ ಎನ್ನುವುದೇ ಕನ್ನಡಿಗರ ಹಾರೈಕೆ.
