Asianet Suvarna News Asianet Suvarna News

ಐತಿಹಾಸಿಕ #500Test ಪಂದ್ಯದಲ್ಲೊಂದು ವಿವಾದ.... ಔಟ್ ಆಗಿದ್ದ ಲಾಥಮ್​​, ನಾಟೌಟ್​​​ ಆಗಿದ್ದು ಏಕೆ ?

KL Rahul involved in helmet controversy

ಕಾನ್ಪುರ(ಸೆ.24): ಐತಿಹಾಸಿಕ ಟೆಸ್ಟ್​​ನ 2ನೇ ದಿನದಾಟದಲ್ಲಿ ವಿವಾದವೊಂದು ತಲೆದೂರಿತ್ತು. ಅರ್ಧಶತಕದ ಹೊಸ್ತಿಲಲ್ಲಿದ್ದ ಟಾಮ್​​ ಲಾಥಮ್​​ ಜಡೇಜಾ ಬೌಲಿಂಗ್​​ನಲ್ಲಿ ಔಟಾಗಿದ್ದರು. ಆದರೆ 3ನೇ ಅಂಪೈರ್​​ ಇದನ್ನು ನಾಟೌಟ್​​ ಅಂತ ಘೋಷಣೆ ಮಾಡಿದರು. 

ಮೊದಲ ಇನ್ನಿಂಗ್ಸ್​​ ಆರಂಭಿಸಿದ್ದ ಕಿವೀಸ್​​​ ಆಟಗಾರರು ಭಾರತೀಯ ಬೌಲರ್​​ಗಳಿಗೆ ದಿಟ್ಟ ಉತ್ತರ ನೀಡುತ್ತಿದ್ದರು. ಟಾಮ್​​ ಲಾಥಮ್​​  ಹಾಗೂ ಕೇನ್​ ವಿಲಿಯಮ್ಸನ್​​​ ಜೋಡಿಗೆ ಬ್ರೇಕ್​​ ಹಾಕಲೇ ಬೇಕಾದ ಒತ್ತಡದಲ್ಲಿದ್ದ ಸಂದರ್ಭದಲ್ಲಿ ರವೀಂದ್ರ ಜಡೇಜಾ ಮ್ಯಾಜಿಕ್​​ ಬಾಲ್​'ಗೆ ​ ವಿಕೆಟ್​​ ಬಿದ್ದೇ ಬಿಡ್ತು ಅಂತ ಟೀಮ್​​ ಇಂಡಿಯಾ ಆಟಗಾರರು ಸಂಭ್ರಮಿಸಿದರು. 

ಆದರೆ ಅಂಪೈರ್​​ ತೀರ್ಮಾನ ನೀಡದೆ ಮತ್ತೋರ್ವ ಅಂಪೈರ್​​ ಜೊತೆಗೆ ಚರ್ಚೆಗೆ ಇಳಿದರು. ಇಬ್ಬರು ಆಂಪೈರ್​​ಗಳು ಲಾಥಮ್​ ಬಾಲ್​ ನೆಲಕ್ಕೆ ತಗಲಿದ ಬಳಿಕ ಕ್ಯಾಚ್​​ ಹಿಡಿದಿರಬಹುದು ಅನ್ನೋ ಗೊಂದಲದಲ್ಲಿ 3ನೇ ಅಂಪೈರ್​​ ತೀರ್ಮಾನಕ್ಕೆ ಬಿಡಲಾಗಿತ್ತು.

ಆದರೆ, ಅಲ್ಲಿ ಆಗಿದ್ದೇ ಬೇರೆ. ರಿ ವ್ಯೂನಲ್ಲಿ ನೋ ಬಾಲ್​​ ಆಗಿರಲಿಲ್ಲ. ಹಾಗೆಯೇ ಕ್ಯಾಚ್​​ ಹಿಡಿಯೋಕೆ ಮುಂಚೆ ಕೂಡ ಬಾಲ್​​ ನೆಲಕ್ಕೆ ತಾಗಿರಲಿಲ್ಲ. ಇಷ್ಟಾಗಿಯೂ 3ನೇ ಅಂಪೈರ್​​ ನಾಟೌಟ್​​ ಘೋಷಣೆ ಮಾಡಿದ್ದು ಮಾತ್ರ ಗೊಂದಲಕ್ಕೆ ಕಾರಣವಾಯ್ತು. 

ರಾಹುಲ್​​ ಹಿಡಿದ ಕ್ಯಾಚ್ ನಿಯಮ ಬಾಹಿರವಾಗಿತ್ತಾ​​  ? 
ಅಸಲಿಯತ್ತು ಬೇರೆಯೇ ಇತ್ತು. ಸಿಲ್ಲಿ ಪಾಯಿಂಟ್​​ನಲ್ಲಿ ರಾಹುಲ್​​ ಪಡೆದಿದ್ದ  ಕ್ಯಾಚ್​​​ ನಿಯಮ ಬಾಹಿರವಾಗಿತ್ತಾ ಅನ್ನೋದು. ರಿವ್ಯೂನಲ್ಲಿ ಇದನ್ನೇ ಗಮನಿಸಿದ 3ನೇ ಅಂಪೈರ್​​​ ತೀರ್ಪನ್ನು ಕಿವೀಸ್​​ ಪರವಾಗಿ ನೀಡಿದರು. 

ಆಟದ ನಿಯಮ 32ರ ಪ್ರಕಾರ ಥರ್ಡ್​​ ಅಂಪೈರ್​​ ನೀಡಿದ ತೀರ್ಪು ಸರಿಯಾಗಿಯೇ ಇದೆ. ಹೀಗಾಗಿ ಇದೊಂದು ವಿವಾದಾತ್ಮಕ ತೀರ್ಪು ಅನ್ನೋದು ತಪ್ಪು ಕಲ್ಪನೆ ಅಷ್ಟೆ. ಸಿಲ್ಲಿ ಪಾಯಿಂಟ್​​ನಲ್ಲಿದ್ದ ರಾಹುಲ್​​​ ಸ್ವತಃ ಕ್ಯಾಚ್​​ ಪಡ್ಕೊಂಡಿರಲಿಲ್ಲ. ಕೈ ತಪ್ಪಿದ್ದ ಬಾಲ್​​ ಅನ್ನು ಹೆಲ್ಮೇಟ್​​ ಸಹಾಯದಿಂದ ರಾಹುಲ್​​ ಹಿಡ್ಕೊಂಡಿದ್ದರು. 

ಐಸಿಸಿ 32ನೇ ನಿಯಮದ ಪ್ರಕಾರ ಕ್ಯಾಚ್​​ ಹಿಡಿಯುವವರು ದೇಹದ ಭಾಗಗಳನ್ನು ಹೊರತು ಪಡಿಸಿ ಬೇರೆ ಯಾವ ಸಹಾಯವನ್ನು ಪಡೆದುಕೊಂಡಿರಬಾರದು. ಉದಾಹರಣೆಗೆ ಈ ಕ್ಯಾಚ್​​ನಲ್ಲಿ ರಾಹುಲ್​​​​ ಹೆಲ್ಮೆಟ್​​​ನ ಗ್ರಿಲ್​​​ ಸಹಾಯ ಪಡ್ಕೊಂಡಿದ್ದರು. ಹಾಗಾಗಿ ಇದನ್ನು ನಾಟೌಟ್​​​ ಎಂದು ಘೋಷಣೆ ಮಾಡಲಾಯಿತು. \

 

Latest Videos
Follow Us:
Download App:
  • android
  • ios