ಕೆ.ಎಲ್.ರಾಹುಲ್ ಆಟಕ್ಕೆ ಮನಸೋತ ಪಾಕ್ ಆ್ಯಂಕರ್ ?

KL Rahul Gets Special Message
Highlights

ಈ ಆಟವನ್ನು ನಮ್ಮ ದೇಶದವರು ಮಾತ್ರವಲ್ಲ ವಿಶ್ವದಾದ್ಯಂತ ಲಕ್ಷಾಂತರ ಕ್ರೀಡಾ ಪ್ರೇಮಿಗಳು ನೋಡಿ ಆನಂದಿಸಿದ್ದರು. ಇವರಲ್ಲಿ ಪಾಕ್ ಮಹಿಳಾ ಆ್ಯಂಕರ್ 'ಜೈನಾ ಅಬ್ಬಾಸ್' ಒಬ್ಬರು ರಾಹುಲ್'ನ ಸ್ಫೋಟಕ ಆಟವನ್ನು ಮೆಚ್ಚಿ ತಮ್ಮ ಟ್ವಿಟರ್'ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ನವದೆಹಲಿ(ಮೇ.10): ಇಂಧೋರ್'ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್  ವಿರುದ್ಧ ಮೊನ್ನೆ ಪಂಜಾಬ್ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್ ತೋರಿದ ಅತ್ಯೋಮೋಘ ಪ್ರದರ್ಶಕ್ಕೆ ಪಾಕ್ ಆ್ಯಂಕರ್ ಒಬ್ಬರು ಮನಸೋತಿದ್ದಾರೆ.
ಅಂದಿನ ಪಂದ್ಯದಲ್ಲಿ ರಾಹುಲ್ 70 ಚಂಡುಗಳಲ್ಲಿ 11 ಬೌಂಡರಿ,2 ಸಿಕ್ಸ್'ರ್'ನೊಂದಿಗೆ  ಅಜೇಯ 95 ರನ್ ಬಾರಿಸಿದ್ದರು. ಉತ್ತಮ ಪ್ರದರ್ಶನ ತೋರಿದ್ದರೂ ಪಂಜಾಬ್ 15 ರನ್'ಗಳಿಂದ ಸೋಲು ಅನುಭವಿಸಿತ್ತು. 
ಈ ಆಟವನ್ನು ನಮ್ಮ ದೇಶದವರು ಮಾತ್ರವಲ್ಲ ವಿಶ್ವದಾದ್ಯಂತ ಲಕ್ಷಾಂತರ ಕ್ರೀಡಾ ಪ್ರೇಮಿಗಳು ನೋಡಿ ಆನಂದಿಸಿದ್ದರು. ಇವರಲ್ಲಿ ಪಾಕ್ ಮಹಿಳಾ ಆ್ಯಂಕರ್ 'ಜೈನಾ ಅಬ್ಬಾಸ್' ಒಬ್ಬರು ರಾಹುಲ್'ನ ಸ್ಫೋಟಕ ಆಟವನ್ನು ಮೆಚ್ಚಿ ತಮ್ಮ ಟ್ವಿಟರ್'ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಹುಲ್ ಒಬ್ಬ ಪ್ರಭಾವಶಾಲಿ ಆಟಗಾರ, ಉತ್ತಮ ಸಮಯ ಜ್ಞಾನದಿಂದ ಆಟವಾಡುತ್ತಾರೆ. ಅವರ ಆಟ ನೋಡುವುದೇ ಸೊಗಸು ಎಂದು ಟ್ವೀಟ್ ಮಾಡಿದ್ದಾರೆ. ಮೂವರು ಕರ್ನಾಟಕದ ಆಟಗಾರರನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ.

loader