ನವದೆಹಲಿ(ಜು.24): ಭಾರತ ತಂಡದ ಆರಂಭಿಕ ಬ್ಯಾಟ್ಸ್'ಮೆನ್ ಕೆ.ಎಲ್. ರಾಹುಲ್  ಶ್ರೀಲಂಕಾ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ಜ್ವರದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಜುಲೈ.26ರಂದು ಗಾಲೆಯ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ.

ಜ್ವರವಿರುವ ಕಾರಣ ಆಟವಾಡದಂತೆ ವೈದ್ಯಕೀಯ ತಂಡ ಸಲಹೆ ನೀಡಿರುವ ಕಾರಣ ಮೊದಲ ಟೆಸ್ಟ್'ನಲ್ಲಿ ಬ್ಯಾಟ್ ಮಾಡುವುದಿಲ್ಲ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಮೊಣಕೈ ಸಮಸ್ಯೆಯಿಂದ ಈಗಾಗಲೇ ಪ್ರಮುಖ ಆಟಗಾರ ಮುರುಳಿ ವಿಜಯ್ ಕೂಡ ಟೆಸ್ಟ್ ಸರಣಿಯಿಂದ ದೂರವುಳಿದಿದ್ದು, ಬದಲಿಗೆ ಶಿಖರ್ ಧವನ್ ಆರಂಭಿಕ ಬ್ಯಾಟ್ಸ್'ಮೆನ್ ಆಗಿ ಕಣಕ್ಕಿಳಿಯುತ್ತಿದ್ದಾರೆ.

ಬ್ಯಾಟ್ ಬಿಟ್ಟು ಹೆಚ್ಚು ಸಮಯ ಕಾಲಕಳೆಯುದಕ್ಕೆ ಸಾಧ್ಯವಾಗುವುದಿಲ್ಲ. ಆರೋಗ್ಯ ಸಮಸ್ಯೆಗಳಿಂದಾಗಿ ಹಲವು ದಿನಗಳಿಂದ ತಂಡದಿಂದ ದೂರವುಳಿದಿದ್ದೆ. ಆದಷ್ಟು ಬೇಗನೆ ಚೇತರಿಸಿಕೊಂಡು ಮೈದಾನದಲ್ಲಿ ಕಾಣಿಸಿಕೊಳ್ಳೆತ್ತೇನೆ ಎಂದು' ರಾಹುಲ್ ತಿಳಿಸಿದ್ದಾರೆ.