ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಗಮನ ಸೆಳೆದ ನರೈನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಕೊಲ್ಕತಾ(ಏ.13): ಗೌತಮ್ ಗಂಭೀರ್ ಭರ್ಜರಿ ಅರ್ಧಶತಕದ ನೆರವಿನಿಂದ ಕೊಲ್ಕತ ನೈಟ್ ರೈಡರ್ಸ್ ಎಂಟು ವಿಕೆಟ್'ಗಳ ಭರ್ಜರಿ ಜಯಭೇರಿ ಬಾರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಡನ್ ಗಾರ್ಡನ್'ನಲ್ಲಿ ಟಾಸ್ ಸೋತರು ಮೊದಲು ಬ್ಯಾಟಿಂಗ್'ಗಿಳಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 20 ಓವರ್'ಗಳಲ್ಲಿ 9 ವಿಕೆಟ್ ನಷ್ಟಕ್ಕೆ 170 ರನ್ ಬಾರಿಸಿತು. ಮೊದಲ ವಿಕೆಟ್'ಗೆ 53 ರನ್ ಕಲೆಹಾಕಿದ ಕಿಂಗ್ಸ್ ನಂತರ ನಿಧಾನಗತಿಯ ಆಟಕ್ಕೆ ಮುಂದಾಯಿತು. ನೈಟ್ ರೈಡರ್ಸ್ ಪರ ಉಮೇಶ್ ಯಾದವ್ 4 ವಿಕೆಟ್ ಪಡೆದು ಮಿಂಚಿದರು.

ಸವಾಲಿನ ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ಕೇವಲ ಎರಡು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಆಶ್ಚರ್ಯಕರವೆಂಬಂತೆ ಗಂಭೀರ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಸ್ಪಿನ್ನರ್ ಸುನಿಲ್ ನರೈನ್ ಭರ್ಜರಿ ಮನರಂಜನೆಯನ್ನೇ ನೀಡಿದರು. ಕೇವಲ 18 ಎಸೆತಗಳನ್ನು ಎದುರಿಸಿದ ನರೈನ್ 4 ಬೌಂಡರಿ ಹಾಗೂ 3 ಸಿಕ್ಸರ್ ನೊಂದಿಗೆ 37ರನ್ ಸಿಡಿಸಿದರು. ನಾಯಕನ ಆಟವಾಡಿದ ಗಂಭೀರ್ 72 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿದರು.

ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಗಮನ ಸೆಳೆದ ನರೈನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.