ಧೋನಿ ಅತ್ಯಂತ ಚಾಣಾಕ್ಷ ಅನುಭವಿ ನಾಯಕ. ವಿಶ್ವ ಕಂಡ ಶ್ರೇಷ್ಠ ನಾಯಕರಲ್ಲಿ ಧೋನಿ ಕೂಡ ಒಬ್ಬರು ಅವರ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವುದು ಬೇಡ.
ಮುಂಬೈ(ನ.02) ಟೀಮ್ ಇಂಡಿಯಾ ನಿಗದಿತ ಓವರ್ಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿಸುವುದು ತಪ್ಪೆಂದು, ಟೀಮ್ ಇಂಡಿಯಾ ಮಾಜಿ ಕೋಚ್ ಆಫ್ರಿಕಾದ ಗ್ಯಾರಿ ಕರ್ಸ್ಟ್ನ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಅತ್ಯಂತ ಚಾಣಾಕ್ಷ ಅನುಭವಿ ನಾಯಕ. ವಿಶ್ವ ಕಂಡ ಶ್ರೇಷ್ಠ ನಾಯಕರಲ್ಲಿ ಧೋನಿ ಕೂಡ ಒಬ್ಬರು ಅವರ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವುದು ಬೇಡ. ನಿಗದಿತ ಓವರ್ಗಳ ನಾಯಕನ್ನಾಗಿ ಧೋನಿಯನ್ನು ಮುಂದುವರೆಸಿದ್ದಲ್ಲಿ ಭಾರತ ತಂಡ ಮತ್ತಷ್ಟೂ ಉನ್ನತ ಮಟ್ಟಕ್ಕೆ ಸಾಗಲಿದೆಯೆಂದಿದ್ದಾರೆ.
ಒಂದು ವೇಳೆ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದಾರೆ. ತಂಡದ ಮೇಲಾಗುವ ದುಷ್ಪರಿಣಾಮಗಳಿಗೆ ನೀವೇ ಜವಾಬ್ದಾರಿ ಹೊರಬೇಕೆಂದು ಎಚ್ಚರಿಸಿದ್ದಾರೆ.
