ಮೊಹಾಲಿ(ಏ.13): 2ನೇ ಆವೃತ್ತಿ ಕಳೆದ 6 ಪಂದ್ಯಗಳಿಗಿಂತ 7ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂ ದಿಟ್ಟ ಹೋರಾಟ ನೀಡಿದೆ.  ಆದರೆ ಕ್ರಿಸ್ ಗೇಲ್ ಅಬ್ಬರಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲೇ ಇಲ್ಲ.  ಕ್ರಿಸ್ ಗೇಲ್ ಏಕಾಂಗಿ ಹೋರಾಟದಿಂದ ಪಂಜಾಬ್ 4 ವಿಕೆಟ್ ನಷ್ಟಕ್ಕೆ 173 ರನ್ ಸಿಡಿಸಿದೆ. ಈ ಮೂಲಕ RCBಗೆ ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಅರ್ಧಶತಕದ ಜೊತೆಯಾಟ ನೀಡಿದರು. ರಾಹುಲ್ 18 ರನ್ ಸಿಡಿಸಿ ಔಟಾದರೆ, ಗೇಲ್ ಏಕಾಂಗಿ ಹೋರಾಟ ನೀಡಿದರು. ಮಯಾಂಕ್ ಅಗರ್ವಾಲ್ 15, ಸರ್ಫರಾಜ್ ಖಾನಮ 15 ರನ್ ಸಿಡಿಸಿ ಪೆವಿಲಿಯನ್  ಸೇರಿಕೊಂಡರು. ಸ್ಯಾಮ್ ಕುರ್ರನ್ 1 ರನ್ ಸಿಡಿಸಿ ನಿರಾಸೆ ಅನುಭವಿಸಿದರು.

ಕುಸಿದ ತಂಡಕ್ಕೆ ಆಸರೆಯಾದ ಗೇಲ್, ಅರ್ಧಶತಕ ಸಿಡಿಸಿದರು. ಗೇಲ್‌ಗೆ ಮನ್ದೀಪ್ ಸಿಂಗ್ ಸಾಥ್ ನೀಡಿದರು. ತಂಡದ ಸಂಪೂರ್ಣ ಜವಾಬ್ದಾರಿ ಹೆಗಲ ಮೇಲೆ ಹೊತ್ತು ಬ್ಯಾಟಿಂಗ್ ನಡೆಸಿದ  ಗೇಲ್ 99 ಅಜೇಯ ರನ್ ಸಿಡಿಸಿದರು.  ಈ ಮೂಲಕ ಸೆಂಚುರಿ ಸಾಧನೆಗೆ ಕೇವಲ 1 ರನ್ ಕೊರತೆ ಅನುಭವಿಸಿದರು.  ಮನ್ದೀಪ್ ಅಜೇಯ 18 ರನ್ ಭಾರಿಸಿದರು. ಈ ಮೂಲಕ ಪಂಜಾಬ್ 4 ವಿಕೆಟ್ ನಷ್ಟಕ್ಕೆ 173 ರನ್ ಸಿಡಿಸಿತು.