ಪಂದ್ಯದ ವೇಳೆ ಅಲ್ಲೇನು ನಡೀತು ಅಂತ ನೀವೇ ಒಮ್ಮೆ ನೋಡಿ...
ಮೊಹಾಲಿ(ಮೇ.08): ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಜತೆಯಲ್ಲಿ ಅಸಭ್ಯ ವರ್ತನೆ ತೋರಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಮುಖ ವೇಗದ ಬೌಲರ್ ಸಂದೀಪ್ ಶರ್ಮಾಗೆ ಪಂದ್ಯದ ಸಂಭಾವನೆಯಲ್ಲಿ ಶೇ.50ರಷ್ಟು ದಂಡ ವಿಧಿಸಲಾಗಿದೆ.
ಲಯನ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಇನಿಂಗ್ಸ್‌ನ 5ನೇ ಓವರ್ ಬೌಲಿಂಗ್ ಮಾಡಿದ ಸಂದೀಪ್, ನಿಯಮದ ಪ್ರಕಾರ ಬೌಲಿಂಗ್ ಮಾಡಿಲ್ಲವೆಂದು ಅಂಪೈರ್ ನಂದಕಿಶೋರ್ ನೋಬಾಲ್ ಎಂದು ತೀರ್ಪು ನೀಡಿದರು. ಇದಕ್ಕೆ ಸಿಟ್ಟಾದ ಸಂದೀಪ್ ಮೈದಾನದಲ್ಲಿ ಅಸಭ್ಯ ವರ್ತನೆ ತೋರಿದರು. ಅಲ್ಲದೇ ಅಂಪೈರ್ ಜತೆ ವಾಗ್ವಾದ ನಡೆಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಪಂಜಾಬ್ ತಂಡದ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಸಹ ಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಂದ್ಯ ಮುಕ್ತಾಯವಾದ ಬಳಿಕ ಸಂದೀಪ್ ಶರ್ಮಾ 1ನೇ ಹಂತದ ಐಪಿಎಲ್ ಕಲಂ 2.1.5ರನ್ವಯ ನೀತಿಸಂಹಿತೆ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ, ಪಂದ್ಯದ ಸಂಭಾವನೆಯ ಶೇ.50% ದಂಡ ವಿಧಿಸಲಾಗಿದೆ.
ಅಷ್ಟಕ್ಕೂ ಪಂದ್ಯದ ವೇಳೆ ಅಲ್ಲೇನು ನಡೀತು ಅಂತ ನೀವೇ ಒಮ್ಮೆ ನೋಡಿ...
