ಪಂಜಾಬ್’ಗೆ ಸವಾಲಿನ ಗುರಿ ನೀಡಿದ ಮುಂಬೈ; ಮತ್ತೆ ಮಿಂಚಿದ ಟೈ

Kings XI Punjab need 187 to win
Highlights

ಪಂಜಾಬ್ ಪರ ಆ್ಯಂಡ್ರೋ ಟೈ 16 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಅಶ್ವಿನ್ 2, ಸ್ಟೋನಿಸ್ ಹಾಗೂ ಅಂಕಿತ್ ರಜಪೂತ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಸಫಲವಾದರು.

ಮುಂಬೈ[ಮೇ.16]: ಆ್ಯಂಡ್ರೋ ಟೈ ಮಾರಕ ದಾಳಿಯ ಹೊರತಾಗಿಯೂ ಕಿರಾನ್ ಪೊಲ್ಲಾರ್ಡ್ ಅಬ್ಬರದ ಅರ್ಧಶತಕದ ನೆರವಿನಿಂದ ಸವಾಲಿನ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಕೇವಲ 3.1 ಎಸೆತಗಳಲ್ಲಿ 37 ರನ್ ಕಲೆಹಾಕುವಲ್ಲಿ ಆರಂಭಿಕರಾದ ಸೂರ್ಯಕುಮಾರ್ ಯಾದವ್-ಎವಿನ್ ಲೆವಿಸ್ 37 ರನ್ ಚಚ್ಚಿದರು. ಈ ವೇಳೆ ಮಿಂಚಿನ ದಾಳಿ ನಡೆಸಿದ ಆ್ಯಂಡ್ರೋ ಟೈ ಎಡಗೈ ಬ್ಯಾಟ್ಸ್’ಮನ್ ಲೆವಿಸ್’ರನ್ನು ಕ್ಲೀನ್ ಬೌಲ್ಡ್ ಮಾಡಿ ಮುಂಬೈಗೆ ಶಾಕ್ ನೀಡಿದರು. ಬಳಿಕ ಆರನೇ ಓವರ್’ನಲ್ಲಿ ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾರನ್ನು ಪೆವಿಲಿಯನ್’ಗೆ ಅಟ್ಟುವ ಮೂಲಕ ಪಂಜಾಬ್’ಗೆ ಮೇಲುಗೈ ಒದಗಿಸಿಕೊಟ್ಟರು.
ಮುಂಬೈಗೆ ಆಸರೆಯಾದ ಕೃನಾಲ್-ಪೊಲ್ಲಾರ್ಡ್ ಬ್ಯಾಟಿಂಗ್: ಒಂದು ಹಂತದಲ್ಲಿ 71/4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈಗೆ ಕೃನಾಲ್ ಪಾಂಡ್ಯ-ಕಿರಾನ್ ಪೊಲ್ಲಾರ್ಡ್ ಆಸರೆಯಾದರು. 5ನೇ ವಿಕೆಟ್’ಗೆ ಈ 65 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಕೃನಾಲ್ 23 ಎಸೆತಗಳಲ್ಲಿ 32 ರನ್ ಸಿಡಿಸಿದರೆ, ಪೊಲ್ಲಾರ್ಡ್ 23 ಎಸೆತಗಳಲ್ಲಿ 50 ರನ್ ಬಾರಿಸಿ ಅಶ್ವಿನ್’ಗೆ ವಿಕೆಟ್ ಒಪ್ಪಿಸಿದರು. 
ಕೊನೆಗೆ ದಿಢೀರ್ ಕುಸಿತ: ಒಂದು ಹಂತದಲ್ಲಿ 15 ಓವರ್’ವರೆಗೆ 10ರ ಸರಾಸರಿಯಲ್ಲಿ ರನ್ ಕಲೆಹಾಕುತ್ತಿದ್ದ ಮುಂಬೈ ಕೃನಾಲ್ ಹಾಗೂ ಪೊಲ್ಲಾರ್ಡ್ ಔಟ್ ಆಗುತ್ತಿದ್ದಂತೆ ದಿಢೀರ್ ಆಗಿ ಕುಸಿಯಿತು. ಹಾರ್ದಿಕ್ ಪಾಂಡ್ಯ [9], ಬೆನ್ ಕಟ್ಟಿಂಗ್ಸ್[4] ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ 200ರ ಗಡಿ ದಾಟಲು ಮುಂಬೈಗೆ ಸಾಧ್ಯವಾಗಲಿಲ್ಲ.
ಪಂಜಾಬ್ ಪರ ಆ್ಯಂಡ್ರೋ ಟೈ 16 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಅಶ್ವಿನ್ 2, ಸ್ಟೋನಿಸ್ ಹಾಗೂ ಅಂಕಿತ್ ರಜಪೂತ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಸಫಲವಾದರು.
ಸಂಕ್ಷಿಪ್ತ ಸ್ಕೋರ್:
ಮುಂಬೈ ಇಂಡಿಯನ್ಸ್: 186/8
ಕಿರಾನ್ ಪೊಲ್ಲಾರ್ಡ್: 50
ಆ್ಯಂಡ್ರೋ ಟೈ: 16/4
[* ವಿವರ ಅಪೂರ್ಣ] 

loader