ಸತತ 4 ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್, ಲೀಗ್‌ನ ಕೊನೆಯ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.
ಪುಣೆ[ಮೇ.20]: ಆರಂಭದ ಶೂರತ್ವವನ್ನು ಕೊನೆಯವರೆಗೂ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್, ಇಂದು ಸಿಎಸ್‌ಕೆ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಪಂದ್ಯದಲ್ಲಿ ಗೆದ್ದು, ಇತರೆ ತಂಡಗಳ ಫಲಿತಾಂಶ ಕೂಡ ಪಂಜಾಬ್ ತಂಡಕ್ಕೆ ಅನುಕೂಲವಾದರೆ ಪ್ಲೇ ಆಫ್‌ಗೇರುವ ಸಾಧ್ಯತೆಯಿದೆ.
ಸತತ 4 ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್, ಲೀಗ್‌ನ ಕೊನೆಯ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ತಾರಾ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡಿರುವ ಪಂಜಾಬ್ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಸದೃಢವಾಗಿದೆ. ಆದರೆ ರಾಹುಲ್ ಹೊರತುಪಡಿಸಿದರೆ, ಇನ್ನುಳಿದ ಬ್ಯಾಟ್ಸ್‌ಮನ್’ಗಳಿಂದ ನಿರೀಕ್ಷಿತ ಪ್ರದರ್ಶನ ಹೊರ ಬರದೇ ಇರುವುದು ಪಂಜಾಬ್‌ಗೆ ಚಿಂತೆಯಾಗಿದೆ. ಚೆನ್ನೈ ಪ್ರಭಾವಿ ಬೌಲಿಂಗ್ ಪಡೆಯನ್ನು ಎದುರಿಸುವುದು ಪಂಜಾಬ್‌ಗೆ ಸವಾಲಾಗಿದೆ.
ಸಂಭಾವ್ಯ ತಂಡ ಹೀಗಿವೆ:
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವಾಟ್ಸನ್, ರಾಯುಡು, ರೈನಾ, ಧೋನಿ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಜಡೇಜಾ, ಡ್ವೇನ್ ಬ್ರಾವೋ, ದೀಪಕ್ ಚಾಹರ್, ಹರ್ಭಜನ್, ಶಾರ್ದೂಲ್, ಲುಂಗಿಸನಿ ಎನ್‌ಗಿಡಿ
ಕಿಂಗ್ಸ್ ಇಲೆವೆನ್ ಪಂಜಾಬ್: ರಾಹುಲ್, ಗೇಲ್, ಫಿಂಚ್, ಸ್ಟೋಯ್ನಿಸ್, ಅಕ್ಷರ್ ಪಟೇಲ್, ಯುವರಾಜ್, ಮನೋಜ್ ತಿವಾರಿ, ಅಶ್ವಿನ್ (ನಾಯಕ),
ಆ್ಯಂಡ್ರೂ ಟೈ, ಮೋಹಿತ್ ಶರ್ಮಾ, ಅಂಕಿತ್ ರಜಪೂತ್
ಸ್ಥಳ: ಪುಣೆ, ಸಮಯ: ರಾತ್ರಿ 8ಕ್ಕೆ,
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
