ಬೆಂಗಳೂರು 10ಕೆ ಗೆದ್ದ ಕಿಮೇಲಿ, ಚೆಪ್ಪೆ...!

* ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪ್ರತಿಷ್ಠಿತ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ ಆಯೋಜನೆ

* ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಂಡು ಬಳಿಕ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗಿದ ಓಟ

* ಎಲೈಟ್‌ 10ಕೆ ಭಾರತೀಯರ ವಿಭಾಗದಲ್ಲಿ ಅಭಿಷೇಕ್‌ ಪಾಲ್‌ ಹಾಗೂ ಪಾರುಲ್‌ ಚೌಧರಿಗೆ ಚಿನ್ನ

Kimeli Cheptai smash course records to win Bengaluru TCS World 10K kvn

ಬೆಂಗಳೂರು(ಮೇ.15) ದೇಶ, ವಿದೇಶದ ಎಲೈಟ್‌ ಅಥ್ಲೀಟ್‌ಗಳ ನಡುವಿನ ಭಾರೀ ಪೈಪೋಟಿಗೆ ಸಾಕ್ಷಿಯಾಗಿದ್ದ ಪ್ರತಿಷ್ಠಿತ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಕೀನ್ಯಾದ ಅಥ್ಲೀಟ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಂಡು ಬಳಿಕ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗಿದ ಓಟದ ಸ್ಪರ್ಧೆಯಲ್ಲಿ ಕೀನ್ಯಾದ ನಿಕೋಲಸ್‌ ಕಿಪ್ಕೋರಿರ್‌ ಕಿಮೇಲಿ ಹಾಗೂ ಐರೆನ್‌ ಚೆಪ್ಟೆಕ್ರಮವಾಗಿ ಎಲೈಟ್‌ ವಿಶ್ವ 10ಕೆ ವಿಭಾಗದ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಕಿಮೇಲಿ 27:38 ನಿಮಿಷಗಳಲ್ಲಿ ಗುರಿ ತಲುಪಿ, 2014ರಲ್ಲಿ ಜೊಫ್ರಿ ಕಾಮ್ವೊರರ್‌ ನಿರ್ಮಿಸಿದ್ದ ದಾಖಲೆ(27:43 ನಿ)ಯನ್ನು ಮುರಿದರು. ಇಥಿಯೋಪಿಯಾದ ಟಡೆಸೆ ವೊರ್ಕು 27:43 ನಿಮಿಷಗಳಲ್ಲಿ ಕ್ರಮಿಸಿ 2ನೇ ಸ್ಥಾನಿಯಾದರು. ಮಾಜಿ ವಿಶ್ವ ಹಾಫ್‌ ಮ್ಯಾರಥಾನ್‌ ದಾಖಲೆ ವೀರ ಕೀನ್ಯಾದ ಕಿಬಿವೋಟ್‌ ಕಂಡೀ 27:57 ನಿಮಿಷದಲ್ಲಿ ಗುರಿ ತಲುಪಿ ಕಂಚು ಗೆದ್ದರು.

ಮಹಿಳಾ ವಿಭಾಗದಲ್ಲಿ ಚೆಪ್ಟೆ30:35 ನಿಮಿಷಗಳಲ್ಲಿ ಗುರಿ ತಲುಪಿ, 2019ರಲ್ಲಿ ಕೀನ್ಯಾದವರೇ ಆದ ಆ್ಯಗ್ನೆಸ್‌ ತಿರೋಪ್‌ ಸೃಷ್ಟಿಸಿದ್ದ ದಾಖಲೆ(31:19 ನಿ.)ಯನ್ನು ಮುರಿದರು. ಕೀನ್ಯಾದ ಹೆಲೆನ್‌ ಓಬಿರಿ 30:44 ನಿಮಿಷಗಳಲ್ಲಿ ಕ್ರಮಿಸಿ 2ನೇ ಸ್ಥಾನ ಪಡೆದರೆ, ಜೋಯ್‌್ಸ ತೆಟೆ (31:47 ನಿ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಅಭಿಶೇಕ್‌, ಪಾರುಲ್‌ಗೆ ಬಂಗಾರ

ಎಲೈಟ್‌ 10ಕೆ ಭಾರತೀಯರ ವಿಭಾಗದಲ್ಲಿ ಅಭಿಷೇಕ್‌ ಪಾಲ್‌ ಹಾಗೂ ಪಾರುಲ್‌ ಚೌಧರಿ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡಿದ್ದರು. ಉತ್ತರ ಪ್ರದೇಶದ ಅಭಿಷೇಕ್‌ 30:05 ನಿಮಿಷಗಳಲ್ಲಿ ಕ್ರಮಿಸಿ ಮೊದಲ ಸ್ಥಾನ ಪಡೆದರೆ, ಕಾರ್ತಿಕ್‌ ಕುಮಾರ್‌(30:06 ನಿ.) ಬೆಳ್ಳಿ ಪಡೆದರು. ಗುಲ್ವೀರ್‌ ಸಿಂಗ್‌ 30:06 ನಿಮಿಷಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು. ರೇಸ್‌ಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿದ್ದ ಕರ್ನಾಟಕದ ಎ.ಬಿ.ಬೆಳ್ಳಿಯಪ್ಪ 31:09 ನಿಮಿಷಗಳಲ್ಲಿ ಕ್ರಮಿಸಿ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮಹಿಳಾ ವಿಭಾಗದಲ್ಲಿ ರೈಲ್ವೇಸ್‌ನ ಪಾರುಲ್‌ 34:38 ನಿಮಿಷಗಳಲ್ಲಿ ಗುರಿ ತಲುಪಿ ತಮ್ಮದೇ ದಾಖಲೆ ಮುರಿದರೆ, ಕಳೆದ ಆವೃತ್ತಿಯ ಚಾಂಪಿಯನ್‌ ಸಂಜೀವಿನಿ ಜಾಧವ್‌(35:44 ನಿ.) ಬೆಳ್ಳಿ ಗೆದ್ದರು. ಕೋಮಲ್‌ ಜಗದಾಳೆ 35:28 ನಿಮಿಷಗಳಲ್ಲಿ ಕ್ರಮಿಸಿ ಕಂಚು ಪಡೆದರು.

ಕಿವುಡರ ಒಲಿಂಪಿಕ್ಸ್‌: ಭಾರತಕ್ಕೆ ಮತ್ತೆ 5 ಪದಕ

ನವದೆಹಲಿ: 24ನೇ ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಭೇಟೆ ಮುಂದುವರಿಸಿದ್ದು, ಮತ್ತೊಂದು ಚಿನ್ನದೊಂದಿಗೆ ಪದಕ ಗಳಿಕೆಯನ್ನು 17ಕ್ಕೆ ಏರಿಸಿದೆ. ಶನಿವಾರ ನಡೆದ ಪುರುಷರ ಫ್ರೀಸ್ಟೈಲ್‌ 97 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸುಮಿತ್‌ ದಹಿಯಾ ಇರಾನ್‌ನ ಗಾಮರ್‌ ವಿರುದ್ಧ ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು. 

ಇಂದು ವಿಶ್ವ 10K ಓಟ, 19 ಸಾವಿರಕ್ಕೂ ಅಧಿಕ ಮಂದಿ ಭಾಗಿ

74 ಕೆ.ಜಿ. ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ವೀರೇಂದ್ರ ಸಿಂಗ್‌ ಅಮೆರಿಕದ ಬ್ಯಾರೊನ್‌ರನ್ನು ಮಣಿಸಿ ಕಿವುಡರ ಒಲಿಂಪಿಕ್ಸ್‌ನಲ್ಲಿ ಸತತ 5ನೇ ಪದಕ ಜಯಿಸಿದರು. 86 ಕೆ.ಜಿ. ವಿಭಾಗದಲ್ಲಿ ಅಮಿತ್‌ ಕೂಡಾ ಕಂಚಿನ ಪದಕ ಗೆದ್ದರು. ಟೆನಿಸ್‌ ಪುರುಷರ ಸಿಂಗಲ್ಸ್‌ನಲ್ಲಿ ಪೃಥ್ವಿ ಶೇಖರ್‌, ಮಿಶ್ರ ಡಬಲ್ಸ್‌ನಲ್ಲಿ ಪೃಥ್ವಿ ಹಾಗೂ ಜಾಫ್ರೀನ್‌ಗೆ ಕಂಚು ಗೆದ್ದರು.

1000ನೇ ವೃತ್ತಿಪರ ಟೆನಿಸ್‌ ಪಂದ್ಯ ಗೆದ್ದ ಜೋಕೋ

ರೋಮ್‌: 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌ ವೃತ್ತಿಪರ ಟೆನಿಸ್‌ನಲ್ಲಿ 1000 ಗೆಲುವು ಸಾಧಿಸಿದ್ದಾರೆ. ಸರ್ಬಿಯಾದ 34 ವರ್ಷದ ಜೋಕೋವಿಚ್‌ 2004ರಲ್ಲಿ ತಮ್ಮ ಮೊದಲ ಎಟಿಪಿ ಪಂದ್ಯ ಗೆದ್ದಿದ್ದು, ಭಾನುವಾರ ಇಟಾಲಿಯನ್‌ ಓಪನ್‌ ಸೆಮಿಫೈನಲ್‌ನಲ್ಲಿ ನಾರ್ವೆಯ ಕಾಸ್ಪೆರ್‌ ರ್ಯುಡ್‌ ವಿರುದ್ಧ ಗೆಲ್ಲುವ ಮೂಲಕ 1000 ಪಂದ್ಯಗಳ ಗೆಲುವಿನ ಮೈಲಿಗಲ್ಲು ತಲುಪಿದರು. ಜೋಕೋ ವೃತ್ತಿಪರ ಟೆನಿಸ್‌ನಲ್ಲಿ 1000ನೇ ಗೆಲುವು ಸಾಧಿಸಿದ 5ನೇ ಆಟಗಾರನಾಗಿದ್ದು, ಜಿಮ್ಮಿ ಕಾನ್ನ​ರ್‍ಸ್, ಇವಾನ್‌ ಲೆಂಡ್ಲ್‌, ರೋಜರ್‌ ಫೆಡರರ್‌ ಹಾಗೂ ರಾಫೆಲ್‌ ನಡಾಲ್‌ ಉಳಿದ ನಾಲ್ವರು.

Latest Videos
Follow Us:
Download App:
  • android
  • ios