Asianet Suvarna News Asianet Suvarna News

ಇಂದು ವಿಶ್ವ 10K ಓಟ, 19 ಸಾವಿರಕ್ಕೂ ಅಧಿಕ ಮಂದಿ ಭಾಗಿ

* ಬೆಂಗಳೂರು 10ಕೆ ಮ್ಯಾರಾಥಾನ್ ಓಟ ಇಂದು ಚಾಲನೆ

* ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಓಟ

* ರೇಸ್‌ ವಿವಿಧ ವಿಭಾಗಗಳಲ್ಲಿ ನಡೆಯಲಿದ್ದು, ಸುಮಾರು 19,000 ಮಂದಿ ಸ್ಪರ್ಧಿಸಲಿದ್ದಾರೆ.

TCS World 10K Bengaluru over 19 thousands likely to participate kvn
Author
Bengaluru, First Published May 15, 2022, 10:30 AM IST

ಬೆಂಗಳೂರು(ಮೇ.15): ಪ್ರತಿಷ್ಠಿತ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ (TCS World 10K Bengaluru) ಭಾನುವಾರ ನಗರದಲ್ಲಿ ನಡೆಯಲಿದ್ದು, ದೇಶ, ವಿದೇಶದ ಎಲೈಟ್‌ ಅಥ್ಲೀಟ್‌ಗಳ ನಡುವಿನ ಪೈಪೋಟಿಗೆ ಸಿಲಿಕಾನ್‌ ಸಿಟಿ ಸಾಕ್ಷಿಯಾಗಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಓಟ, ಹಲವು ಪ್ರಮುಖ ರಸ್ತೆಗಳಲ್ಲಿ ಸಾಗಿ ಕಂಠೀರವದಲ್ಲೇ ಮುಕ್ತಾಯಗೊಳ್ಳಲಿದೆ.

ಪ್ರತಿ ಬಾರಿಯಂತೆ ರೇಸ್‌ ವಿವಿಧ ವಿಭಾಗಗಳಲ್ಲಿ ನಡೆಯಲಿದ್ದು, ಸುಮಾರು 19,000 ಮಂದಿ ಸ್ಪರ್ಧಿಸಲಿದ್ದಾರೆ. ಮ್ಯಾರಥಾನ್‌ನ ವಿಶ್ವ ದಾಖಲೆ ವೀರರಾದ ಕೀನ್ಯಾದ ಪಾಲ್‌ ತನುಯಿ, ನಿಕೋಲಸ್‌ ಕಿಮೆಲಿ, ಕಿಬಿವೊಟ್‌ ಕಂಡೀ, ಇಥಿಯೋಪಿಯಾದ ಮುಕ್ತಾರ್‌ ಎದ್ರಿಸ್‌ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಭಾರತದ ಶ್ರಿನು ಬುಗಾತ, ಕಾರ್ತಿಕ್‌ ಕುಮಾರ್‌, ಸೇರಿದಂತೆ ಹಲವು ಅಗ್ರ ಅಥ್ಲೀಟ್‌ಗಳು ರೇಸ್‌ನ ಪ್ರಮುಖ ಆಕರ್ಷಣೆಯಾಗಲಿದ್ದು, ಕರ್ನಾಟಕದ ತಾರಾ ಅಥ್ಲೀಟ್‌ ಎ.ಬಿ.ಬೆಳ್ಳಿಯಪ್ಪ ಮೇಲೆ ಭಾರೀ ನಿರೀಕ್ಷೆ ಇದೆ.

ರೇಸ್‌ನಲ್ಲಿ ಚಾಂಪಿಯನ್‌ ಆಗುವ ವಿದೇಶಿ ಅಥ್ಲೀಟ್‌ಗಳು 26,000 ಅಮೆರಿಕನ್‌ ಡಾಲರ್‌(ಸುಮಾರು 20.14 ಲಕ್ಷ ರು.) ಹಾಗೂ ಭಾರತದ ಚಾಂಪಿಯನ್‌ ಅಥ್ಲೀಟ್‌ಗಳು 2,75,000 ರು. ಬಹುಮಾನದ ಮೊತ್ತ ಪಡೆಯಲಿದ್ದಾರೆ. ಇನ್ನು ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನ ಆಯೋಜಕರು ಓಟದ ಪ್ರಚಾರಕ್ಕಾಗಿ ಶನಿವಾರ ಆಯೋಜಿಸಿದ್ದ ಕಾರ‍್ಯಕ್ರಮದಲ್ಲಿ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ, ವಿಧಾನಪರಿಷತ್‌ ಸದಸ್ಯ ಡಾ.ಕೆ.ಗೋವಿಂದರಾಜು ಹಾಗೂ ಮೈಸೂರು ಮಹಾರಾಜ ಯದುವೀರ್‌ ಒಡೆಯರ್‌ ಅವರು ಒಟ್ಟಿಗೆ ಪಾಸ್ತಾ ತಯಾರಿಸಿ ಗಮನ ಸೆಳೆದರು.

ಬೆಂಗ್ಳೂರು 10ಕೆಗೆ ವಿಶ್ವ ದಾಖಲೆ ವೀರರು

ಭಾನುವಾರ ನಡೆಯಲಿರುವ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಖ್ಯಾತ ಅಥ್ಲೀಟ್‌ಗಳಾದ ಇಥಿಯೋಪಿಯಾದ ಮುಕ್ತಾರ್‌ ಎದ್ರಿಸ್‌, ಕೀನ್ಯಾದ ಕಿಬಿವೊಟ್‌ ಕಂಡೀ, ಅಂಡಾಮ್ಲಕ್‌ ಬೆಲಿಹು, ಹೆಲೆನ್‌ ಓಬಿರಿ, ಐರೆನ್‌ ಚೆಪ್ಟೆನಗರದ ಕಂಠೀರವ ಕ್ರೀಡಾಂಗಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು.

ನಮಗೆ ನಾವೇ ನಂ.1 ಫ್ಯಾನ್‌ ಆಗ್ಬೇಕು: ಗ್ಯಾಟ್ಲಿನ್‌

ನಮಗೆ ನಾವೇ ನಂ.1 ಫ್ಯಾನ್‌ ಆಗಬೇಕು. ಎಲ್ಲರಿಗಿಂತ ಹೆಚ್ಚಾಗಿ ನಮ್ಮ ಬೆಳವಣಿಗೆ ಬಗ್ಗೆ ನಾವೇ ವಿಮರ್ಶೆ ಮಾಡಿಕೊಳ್ಳಬೇಕು. ಸ್ಥಿರತೆ ಕಾಯ್ದುಕೊಂಡರಷ್ಟೇ ಸಾಧನೆ ಮಾಡಲು ಸಾಧ್ಯ. ಇದು ಅಮೆರಿಕದ ದಿಗ್ಗಜ ಓಟಗಾರ, 2004ರ ಒಲಿಂಪಿಕ್ಸ್‌ 100 ಮೀ. ಓಟದಲ್ಲಿ ಚಿನ್ನ ಗೆದ್ದ, 4 ಬಾರಿ ವಿಶ್ವ ಚಾಂಪಿಯನ್‌ ಆಗಿರುವ ಜಸ್ಟಿನ್‌ ಗ್ಯಾಟ್ಲಿನ್‌ ಯುವ ಅಥ್ಲೀಟ್‌ಗಳಿಗೆ ನೀಡಿದ ಸಲಹೆ.

ಥಾಮಸ್‌ ಕಪ್‌: ಐತಿಹಾಸಿಕ ಚಿನ್ನದ ನಿರೀಕ್ಷೆಯಲ್ಲಿ ಭಾರತ

ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನ ರಾಯಭಾರಿಯಾಗಿ ನೇಮಕಗೊಂಡಿರುವ ಗ್ಯಾಟ್ಲಿನ್‌, ಗುರುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮಾಧ್ಯಮಗಳ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡರು. ವಿಶ್ವದ ವೇಗದ ಓಟಗಾರ, ಜಮೈಕಾದ ಉಸೇನ್‌ ಬೋಲ್ಟ್‌ ಜೊತೆಗಿನ ಪೈಪೋಟಿಯ ದಿನಗಳನ್ನು ನೆನೆದ ಗ್ಯಾಟ್ಲಿನ್‌, ‘ನಾವಿಬ್ಬರೂ ಎಷ್ಟೇ ಪೈಪೋಟಿ ನಡೆಸಿದರೂ, ಪರಸ್ಪರ ಗೌರವ ಹೊಂದಿದ್ದೇವೆ. ಒಬ್ಬ ಅಥ್ಲೀಟ್‌ ಆಗಿ ಮತ್ತೊಬ್ಬ ಅಥ್ಲೀಟನ್ನು ಗೌರವಿಸುವುದು ಬಹಳ ಮುಖ್ಯ’ ಎಂದರು.

2023ರ ಎಎಫ್‌ಸಿ ಕಪ್‌ ಆತಿಥ್ಯದಿಂದ ಚೀನಾ ಹಿಂದಕ್ಕೆ

ಕೌಲಾಲಂಪುರ: ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 2023ರ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿ ಆಯೋಜನೆಯಿಂದ ಚೀನಾ ಹಿಂದಕ್ಕೆ ಸರಿದಿದೆ. ಈ ವಿಷಯನ್ನು ಶನಿವಾರ ಏಷ್ಯನ್‌ ಫುಟ್ಬಾಲ್‌ ಫೆಡರೇಶನ್‌(ಎಎಫ್‌ಸಿ) ಖಚಿತಪಡಿಸಿದೆ. ಟೂರ್ನಿ 2023ರ ಜೂ.16ರಿಂದ ಜು.16ರ ವರೆಗೆ ಚೀನಾದ 10 ನಗರಗಳಲ್ಲಿ ನಡೆಯಬೇಕಿತ್ತು. ಭಾರತ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದು, ಮುಂದಿನ ತಿಂಗಳು ಕೋಲ್ಕತಾದಲ್ಲಿ ಅರ್ಹತಾ ಪಂದ್ಯಗಳನ್ನಾಡಬೇಕಿದೆ.


 

Follow Us:
Download App:
  • android
  • ios