ಬೆಂಗಳೂರು(ಆ.21): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಎಲ್ಲಾ ತಯಾರಿ ಪೂರ್ಣಗೊಂಡಿದೆ. ಆಗಸ್ಟ್ 16ರಿಂದ ಆರಂಭಗೊಳ್ಳುತ್ತಿರುವ 8ನೇ ಆವೃತ್ತಿ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ KPL ಟ್ರೋಫಿ ಅನಾವರಣ ಮಾಡೋ ಮೂಲಕ ಟೂರ್ನಿ ಚಟುವಟಿಕೆಗಳು ಆರಂಭಗೊಂಡಿದೆ. ಈ ಬಾರಿಯ ಟ್ರೋಫಿ ಲಾಂಚ್ ಕಳೆದ 7 ಆವೃತ್ತಿಗಳಿಗಿಂತ ಭಿನ್ನವಾಗಿತ್ತು.

ಇದನ್ನೂ ಓದಿ: ಮಳೆಯಿಂದಾಗಿ KPL ಟೂರ್ನಿಯಲ್ಲಿ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!

ಖ್ಯಾತ ಜಾದೂಗಾರ ಆಕಾಶ್ ಅವರ ಕೈಚಳಕದ ಮೂಲಕ 8ನೇ ಆವೃತ್ತಿ KPL ಟ್ರೋಫಿ ಲಾಂಚ್ ಮಾಡಲಾಯಿತು.   ವೇದಿಕೆ ಮೇಲಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಹಾಗೂ ನಟ,  ಕಿಚ್ಚ ಸುದೀಪ್ ನಡುವೆ ಜಾದೂ ಮೂಲಕ ಭಾರತ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಟ್ರೋಫಿ ಹಿಡಿದು ಪ್ರತ್ಯಕ್ಷವಾದರು. ಹೊಸ ರೀತಿಯಲ್ಲಿ ಟ್ರೋಫಿ ಲಾಂಚ್ ಎಲ್ಲರಿಗೂ ಅಚ್ಚರಿ ತಂದಿತ್ತು.

"

ಇದನ್ನೂ ಓದಿ: ಪ್ರವಾಹ ಸಂತ್ರಸ್ತರ ನೆರವಿಗೆ KPL ಕ್ರಿಕೆಟ್!

ಟ್ರೋಫಿ ಲಾಂಚ್ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಪ್ರಿಮಿಯರ್ ಲೀಗ್ ಯಶಸ್ವಿಯಾಗಲಿ ಎಂದರು. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವುದೇ ಹೆಮ್ಮೆ. ಎಲ್ಲರೂ ವಿದಾಯ ಹೇಳುವ ಸಮಯದಲ್ಲಿ ನಾನು ಕ್ರಿಕೆಟ್ ಶುರುಮಾಡಿದ್ದೇನೆ. ನಾನು ಮತ್ತೆ ಕ್ರಿಕೆಟ್ ಆಡುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ KSCA ಸಹಕಾರದಿಂದ ಮತ್ತೆ ಆಡುವಂತಾಯಿತು ಎಂದು ಸುದೀಪ್ ಹೇಳಿದರು. ಕೆಪಿಎಲ್ ಟೂರ್ನಿಯಲ್ಲಿ ಕಿಚ್ಚು ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡ 2 ಆವೃತ್ತಿಗಳಲ್ಲಿ ಪಾಲ್ಗೊಂಡಿತ್ತು.

ಕೆಪಿಎಲ್ ಟೂರ್ನಿಯಲ್ಲಿ ಆಡೋ ವೇಳೆ ಕೆಲ ಕ್ರಿಕೆಟಿಗರ ವಿಕೆಟ್ ಕಬಳಿಸಿದ್ದೇವೆ. ಅವರೆಲ್ಲಾ ಈಗ ಟೀಂ ಇಂಡಿಯಾದಲ್ಲಿ ಆಡುತ್ತಿದ್ದಾರೆ. ಮುಂದಿನ ವರ್ಷ ಕೆಪಿಎಲ್ ಟೂರ್ನಿಗೆ ಮತ್ತೆ ರಾಕ್ ಸ್ಟಾರ್ ಟೀಂ ಆಡಲಿದೆ. ಇದಕ್ಕೆ  KSCA ಅಧ್ಯಕ್ಷರಾದ ಸಂಜಯ್ ದೇಸಾಯಿ ಸಹಕಾರ ಇರಲಿ ಎಂದು ಸುದೀಪ್ ಹೇಳಿದರು. ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳಿಗೆ ಶುಭಕೋರಿದ ಸುದೀಪ್, ಟೂರ್ನಿ ಆಯೋಜನೆಗೆ ಹ್ಯಾಟ್ಸ್‌ಹಾಫ್ ಹೇಳಿದರು.

ಇದನ್ನೂ ಓದಿ: KPL 2019: ಇಲ್ಲಿದೆ ಆಟಗಾರರ ಹರಾಜಿನ ಸಂಪೂರ್ಣ ಲಿಸ್ಟ್ !

ಪ್ರತಿಭಾನ್ವಿತರಿಗೆ ಕೆಪಿಎಲ್ ಉತ್ತಮ ವೇದಿಕೆಯಾಗಿದೆ. ಕೆಪಿಎಲ್ ಟೂರ್ನಿ ಆಡೋ ಯುವ ಕ್ರಿಕೆಟಿಗರು ಅಷ್ಟೇ ವೇಗದಲ್ಲಿ ಐಪಿಎಲ್ ಹಾಗೂ ಟೀಂ ಇಂಡಿಯಾ ಪ್ರತಿನಿಧಿಸಲು ಅವಕಾಶಗಳಿವೆ. ಈಗಾಗಲೇ ಕೆಪಿಎಲ್ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಬಾರಿಯ ಕೆಪಿಎಲ್ ಟೂರ್ನಿಯಲ್ಲಿ ಸರ್ಕಾರಿ ಶಾಲಾ ಮಕ್ಕಳು, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕನ್ನಡಿಗ ಬಿಎಸ್ ಚಂದ್ರಶೇಖರ್ ಹೇಳಿದರು.

ಕೆಪಿಎಲ್ ಟೂರ್ನಿ ಲಾಂಚ್ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಿಆರ್ ವಿಶ್ವನಾಥ್, ದೊಡ್ದ ಗಣೇಶ್,  ಸ್ಯಾಂಡಲ್‌ವುಟ್ ನಟಿ ಪ್ರೇಮಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

"