ಪ್ರವಾಹ ಸಂತ್ರಸ್ತರ ನೆರವಿಗೆ KPL ಕ್ರಿಕೆಟ್!
ಕರ್ನಾಟಕ ಪ್ರವಾಹ ಇದೀಗ ಕೆಪಿಎಲ್ ಕ್ರಿಕೆಟ್‌ಗೂ ತಟ್ಟಿದೆ. ಆಗಸ್ಟ್ 16 ರಿಂದ ಆರಂಭಗೊಳ್ಳಲಿರುವ ಕೆಪಿಎಲ್ ಕ್ರಿಕೆಟ್‌ಗಾಗಿ ತಂಡಗಳು ಅಭ್ಯಾಸ ನಡೆಸುತ್ತಿವೆ. ಆದರೆ ಫ್ರಾಂಚೈಸಿ ಮಾಲೀಕರು ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.
ಬೆಂಗಳೂರು(ಆ.11): ಕರ್ನಾಟಕ ಪ್ರಿಮಿಯರ್ ಲೀಗ್ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಆದರೆ ಮಹತ್ವದ ಟೂರ್ನಿ ಆರಂಭಕ್ಕೂ ಮುನ್ನವೇ ಕರ್ನಾಟಕದಲ್ಲಿನ ಪ್ರವಾಹ ಬಿಸಿ KPL ಟೂರ್ನಿಗೂ ತಟ್ಟುತ್ತಿದೆ. ಟೂರ್ನಿಗೆ ತಯಾರಿ ನಡೆಸುತ್ತಿರುವ KPL ಫ್ರಾಂಚೈಸಿ, ಇದೀಗ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದೆ.
ಇದನ್ನೂ ಓದಿ: KPL 2019: ಹುಬ್ಬಳ್ಳಿ ಪಂದ್ಯಗಳು ಬೆಂಗ್ಳೂರು, ಮೈಸೂರಿಗೆ ಶಿಫ್ಟ್
ಉತ್ತರ ಕರ್ನಾಟಕ , ಕೊಡಗು ಹಾಗೂ ಕರಾವಳಿ ಭಾಗ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ. ಹಲವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರೆ, ಲಕ್ಷಾಂತರ ಮಂದಿ ಬದುಕು ನರಕವಾಗಿದೆ. ಮೈಸೂರು ವಾರಿಯರ್ಸ್ ಫ್ರಾಂಚೈಸಿ ಮಾಲೀಕ ಅರ್ಜುನ್ ರಂಗ, ಬಿಜಾಪುರ ಬುಲ್ಸ್ ಮಾಲೀಕ ಕಿರಣ್ ಕಟ್ಟೀಮನಿ ಸೇರಿದಂತೆ ಫ್ರಾಂಚೈಸಿ ಮಾಲೀಕರು ಸಂತ್ರಸ್ತರಿಗೆ ನೆರವು ನೀಡಿದ್ದಾರೆ.
ಇದನ್ನೂ ಓದಿ: KPL 2019: ಇಲ್ಲಿದೆ ಆಟಗಾರರ ಹರಾಜಿನ ಸಂಪೂರ್ಣ ಲಿಸ್ಟ್ !
KPL ಫ್ರಾಂಚೈಸಿಗಳ ಬಿ ತಂಡ ಹಾಗೂ 25 ಸ್ವಯಂ ಸೇವಕರನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿದೆ. ಈ ಮೂಲಕ ಅಗತ್ಯ ನೆರವಿಗೆ KPL ಫ್ರಾಂಚೈಸಿ ಸಜ್ಜಾಗಿದೆ. ರಣಭೀಕರ ಮಳೆಯಿಂದ ಈ ಬಾರಿಯ ಹುಬ್ಬಳ್ಳಿ ಚರಣ ಪಂದ್ಯಗಳು ಬೆಂಗಳೂರು ಹಾಗೂ ಮೈಸೂರಿಗೆ ಸ್ಥಳಾಂತರ ಮಾಡಲಾಗಿದೆ. ಆಗಸ್ಟ್ 16 ರಿಂದ ಆರಂಭವಾಗಲಿರುವ ಕೆಪಿಎಲ್ ಟೂರ್ನಿಗೆ ಈಗಾಗಲೇ ನಾಯಕರ ಆಯ್ಕೆ ಕೂಡ ಮುಗಿದಿದೆ. ನಾಯಕರ ನೇಮಕ ಪ್ರಕಟಣೆ ವೇಳೆ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಇನ್ನುಷ್ಟು ನೆರವು ನೀಡುವುದಾಗಿ ಕೆಪಿಎಲ್ ಫ್ರಾಂಚೈಸಿಗಳು ಘೋಷಿಸಿದ್ದಾರೆ.
4 ತಂಡಗಳು ಹೊಸ ನಾಯಕರನ್ನು ಆಯ್ಕೆ ಮಾಡಿದೆ. ಇನ್ನುಳಿದ ತಂಡ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬೆಂಗಳೂರು ಬ್ಲಾಸ್ಟರ್ಸ್ ತಂಡ ರಾಬಿನ್ ಉತ್ತಪ್ಪ ಬದಲು ಜೋನಾಥನ್ ರಾಂಗ್ಸೆನ್, ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಸ್ಟುವರ್ಟ್ ಬಿನ್ನಿ ಬದಲು ಕೊನೈನ ಅಬ್ಬಾಸ್, ಶಿವಮೊಗ್ಗ ತಂಡದ ನಾಯಕನಾಗಿ ಅಭಿಮನ್ಯು ಮಿಥುನ್, ಮೈಸೂರ್ ವಾರಿಯರ್ಸ್ ತಂಡದ ನಾಯಕನಾಗಿ ಜೆ ಸುಚಿತ್ ಬದಲು ಅಮಿತ್ ವರ್ಮಾ ಆಯ್ಕೆಯಾಗಿದ್ದಾರೆ.
ಬಿಜಾಪುರ ಬುಲ್ಸ್, ಹುಬ್ಳಿ ಟೈಗರ್ಸ್, ಬಳ್ಳಾರಿ ಟಸ್ಕರ್ಸ್ ತಂಡ ಭರತ್ ಚಿಪ್ಲಿ, ಆರ್ ವಿನಯ್ ಕುಮಾರ್, ಸಿಎಂ ಗೌತಮ್ ನಾಯಕರಾಗಿ ಮುಂದುವರಿದಿದ್ದಾರೆ.