ಖೇಲೋ ಇಂಡಿಯಾ: ರಾಜ್ಯದಿಂದ 280 -ಒಟ್ಟು 9000 ಅಥ್ಲೀಟ್‌ಗಳ ನಡುವೆ ಸ್ಪರ್ಧೆ!
ನಾಳೆಯಿಂದ ಖೇಲೋ ಇಂಡಿಯಾ ಆರಂಭಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ ಆಯೋಜಿಸಲಾಗಿರುವ ಈ ಕ್ರೀಡಾಕೂಟದಲ್ಲಿ ರಾಜ್ಯದಿಂದ 280 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ದೇಶದಿಂದ ಒಟ್ಟುು 9000 ಕ್ರೀಡಾಪಟುಗಳು ಖೇಲೋ ಇಂಡಿಯಾದಲ್ಲಿ ಭಾಗವಹಿಸಲಿದ್ದಾರೆ.
ಮುಂಬೈ(ಜ.08): ಜ.9ರಿಂದ ಆರಂಭಗೊಳ್ಳಲಿರುವ ಖೇಲೋ ಇಂಡಿಯಾ ಗೇಮ್ಸ್‌ಗೆ ಮಹಾರಾಷ್ಟ್ರದ ಪುಣೆ ಸಿದ್ದಗೊಂಡಿದೆ. ಮೊದಲ ಆವೃತ್ತಿಗಿಂತ ಈ ಬಾರಿಯ ಆವೃತ್ತಿಯಲ್ಲಿ ಸುಧಾರಿತ ಕ್ರೀಡಾ ಮೂಲಸೌಕರ್ಯ ಮತ್ತು ಸುಸಜ್ಜಿತ ಶೂಟಿಂಗ್ ರೇಂಜ್ ಇರಲಿದ್ದು, ಯುವ ಕ್ರೀಡಾಳುಗಳು ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: ಬಂದ್ ಬಿಸಿ: ಯಾವೆಲ್ಲಾ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ? ಇಲ್ಲಿದೆ ಪಟ್ಟಿ
ಥೇಲೋ ಇಂಡಿಯಾ ಗೇಮ್ಸ್ ಆತಿಥ್ಯವಹಿಸುತ್ತಿರುವ ಮಹಾರಾಷ್ಟ್ರಕ್ಕೆ ದೊರೆತ ಗೌರವವಾಗಿದೆ. ಬಾಳೆವಾಡಿ ಕ್ರೀಡಾಂಗಣವನ್ನ ನವೀಕರಿಸಲಾಗಿದೆ. ಕೂಟದಲ್ಲಿ ಒಟ್ಟು 18 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ., ಕ್ರೀಡಾಕೂಟದಲ್ಲಿ ಒಟ್ಟು 9000 ಕ್ರೀಡಾಪಟುಗಳು ಮತ್ತು 4000 ವ್ಯವಸ್ಥಾಪಕರು ಸೇರಿದಂತೆ ಒಟ್ಟಾರೆ 14000 ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಮಹಾರಾಷ್ಟ್ರದಿಂದಲೇ 900ಕ್ಕೂ ಹೆಚ್ಚು ಕ್ರೀಡಾಪಟುಗಳ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಹರಾಷ್ಟ್ರ ಕ್ರೀಡಾ ಸಚಿವ ವಿನೊದ್ ತಾವಡೆ ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ದಾಖಲಾದ ಅಪರೂಪದ 10 ಮೈಲಿಗಲ್ಲು!
ಖೇಲೋ ಇಂಡಿಯಾ ಗೇಮ್ಸ್‌ಗೆ ಮಹಾರಾಷ್ಟ್ರದಿಂದ ಆಯ್ಕೆಯಾಗಿರುವ ಅಥ್ವೀಟ್‌ಗಳಿಗೆ 15 ದಿನ ವಿಶೇಶ ತರಬೇತಿ ನೀಡಲಾಗಿದೆ. ಅಲ್ಲದೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ವಾರ್ಷಿಕ ಪರೀಕ್ಷೆಗಳಲ್ಲಿ 10 ರಿಂದ 20 ರಷ್ಟು ಹೆಚ್ಚುವರಿ ಅಂಕ ಮತ್ತು ಸರ್ಕಾರಿ ನೇಮಕಾತಿಯ.ಲ್ಲಿ ಶೇ.5ರಷ್ಟು ಹುದ್ದೆಗಳನ್ನ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ತಾವಡೆ ಹೇಳಿದ್ದಾರೆ.
ಇದನ್ನೂ ಓದಿ: ಚೇತೇಶ್ವರ್ ಪೂಜಾರ ಯಾಕೆ ಡ್ಯಾನ್ಸ್ ಮಾಡಲ್ಲ-ಕೊಹ್ಲಿ ಹೇಳಿದ್ರು ಸೀಕ್ರೆಟ್!
ರಾಜ್ಯದಿಂದ 280 ಸ್ಪರ್ಧಿಗಳು: ಕರ್ನಾಟಕದಿಂದ ಸರಿ ಸುಮಾರು 280 ಕ್ಕೂ ಹೆಚ್ಚು ಸ್ಪರ್ಧಿಗಳು ಕೂಡದಲ್ಲಿ ಭಾಗವಹಿಸುತ್ತಿದ್ದಾರೆ. ತಾರ ಈಜುಪಟು ಶ್ರೀಹರಿ ನಟರಾಜು ಸೇರಿದಂತೆ ಇತರೆ ಸ್ಪರ್ಧಿಗಳು ಪದಕದ ವಿಶ್ವಾಸದಲ್ಲಿದ್ದಾರೆ. ಕ್ರೀಡಾಕೂಡದಲ್ಲಿ ಭಾಗವಹಿಸಲು ಅಂಡರ್-17 ಕರ್ನಾಟಕ ಫುಟ್ಬಾಲ್ ತಂಡ ಈಗಾಗಲೇ ಮಹಾರಾಷ್ಟ್ರಕ್ಕೆ ತೆರಳಿದೆ.