ಡೋಪಿಂಗ್: 3 ಖೇಲೋ ಇಂಡಿಯಾ ಕ್ರೀಡಾಳುಗಳು ಬಲೆಗೆ
ಕ್ರೀಡಾಕೂಟದ ವೇಳೆ ಒಟ್ಟು 476 ಅಥ್ಲೀಟ್‌ಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ 466 ಮಾದರಿಗಳ ಪರೀಕ್ಷೆ ಮುಕ್ತಾಯಗೊಂಡಿದೆ ಎಂದು ನಾಡಾ ತಿಳಿಸಿದೆ.
ನವದೆಹಲಿ[ಮಾ.22]: 2019ರ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಮೂವರು ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.
ಒಬ್ಬ ವೇಟ್‌ಲಿಫ್ಟರ್, ಜುಡೋ ಪಟು, ಈಜು ಪಟು ನಿಷೇಧಿತ ಮದ್ದು ಸೇವಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದರೊಂದಿಗೆ ಡೋಪಿಂಗ್ ಪರೀಕ್ಷೆಯಲ್ಲಿ ಅನುತೀರ್ಣಗೊಂಡ ಕ್ರೀಡಾಪಟುಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಕ್ರೀಡಾಕೂಟದ ವೇಳೆ ಒಟ್ಟು 476 ಅಥ್ಲೀಟ್‌ಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ 466 ಮಾದರಿಗಳ ಪರೀಕ್ಷೆ ಮುಕ್ತಾಯಗೊಂಡಿದೆ ಎಂದು ನಾಡಾ ತಿಳಿಸಿದೆ.
ಡೋಪಿಂಗ್ ನಡೆಸಿ ಸಿಕ್ಕಿಬಿದ್ದಿರುವ ಕ್ರೀಡಾಪಟುಗಳ ಪದಕ ವಾಪಸ್ ಪಡೆಯಲಾಗುವುದು ಹಾಗೇ ಅವರ ಅಭ್ಯಾಸಕ್ಕೆ ಒದಗಿಸಲಾಗುತ್ತಿರುವ ಸೌಲಭ್ಯಗಳು ಹಿಂದಕ್ಕೆ ಪಡೆಯಲಾಗುವುದು ಎಂದು ನಾಡಾ ತಿಳಿಸಿದೆ.