‘‘ಅಶ್ವಿನ್ ಅತ್ಯುತ್ತಮ ಬೌಲರ್, ಬೌಲಿಂಗ್‌ನಲ್ಲಿ ವಿಭಿನ್ನತೆ ಕಾಣಲು ಹೆಚ್ಚು ಬಯಸುತ್ತಾರೆ. ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಸ್ಪಿನ್ ಮೋಡಿಯಿಂದ ದಾಳಿ ಮಾಡುವ ಗುರಿ ಅಶ್ವಿನ್ ಅವರದ್ದಾಗಿರುತ್ತದೆ’’- ಕೆವಿನ್ ಪೀಟರ್ಸನ್
ನವದೆಹಲಿ
ಭಾರತದ ಸ್ಟಾರ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಎಚ್ಚರವಿರಲಿ ಎಂದು ಇಂಗ್ಲೆಂಡ್ ತಂಡದ ಆಟಗಾರರಿಗೆ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಬುದ್ದಿಮಾತು ಹೇಳಿದ್ದಾರೆ.
ಇದೇ ತಿಂಗಳ ನವೆಂಬರ್ 9ರಿಂದ ಭಾರತ ವಿರುದ್ಧ ಇಂಗ್ಲೆಂಡ್ 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ರಾಜ್ಕೋಟ್ನಲ್ಲಿ ಮೊದಲ ಪಂದ್ಯ ಮುಂದಿನ ಬುಧವಾರದಿಂದ ಆರಂಭಗೊಳ್ಳಲಿದೆ. ಭಾರತ ತಂಡ ಅಶ್ವಿನ್ ಸೇರಿದಂತೆ ಅಮಿತ್ ಮಿಶ್ರಾ ಮತ್ತು ರವೀಂದ್ರ ಜಡೇಜಾ ಅವರನ್ನು ಕಣಕ್ಕಿಳಿಸುತ್ತಿದೆ.
ಅಶ್ವಿನ್ ತವರಿನಲ್ಲಿ ಆಡಿರುವ 22 ಟೆಸ್ಟ್ ಪಂದ್ಯಗಳಿಂದ 153 ವಿಕೆಟ್ ಪಡೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-3 ಅಂತರದಲ್ಲಿ ಭಾರತ ಗೆಲುವು ಪಡೆದಿತ್ತು. ‘‘ಅಶ್ವಿನ್ ಅತ್ಯುತ್ತಮ ಬೌಲರ್, ಬೌಲಿಂಗ್ನಲ್ಲಿ ವಿಭಿನ್ನತೆ ಕಾಣಲು ಹೆಚ್ಚು ಬಯಸುತ್ತಾರೆ. ಎದುರಾಳಿ ತಂಡದ ಬ್ಯಾಟ್ಸ್ಮನ್ಗಳ ಮೇಲೆ ಸ್ಪಿನ್ ಮೋಡಿಯಿಂದ ದಾಳಿ ಮಾಡುವ ಗುರಿ ಅಶ್ವಿನ್ ಅವರದ್ದಾಗಿರುತ್ತದೆ’’ ಎಂದು ಪೀಟರ್ಸನ್ ‘ದ ಕ್ರಿಕೆಟರ್’ ನಿಯತಕಾಲಿಕೆಗೆ ಹೇಳಿದ್ದಾರೆ.
ಪ್ರಸಕ್ತ ವರ್ಷದ ಎಲ್ಲಾ ವಿಭಾಗಗಳಲ್ಲೂ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹೀಗಾಗಿ ಮೊದಲು ಕೊಹ್ಲಿ ಅವರ ಬ್ಯಾಟಿಂಗ್ಗೆ ಕಡಿವಾಣ ಹಾಕಬೇಕು ಎಂದು ಬೌಲರ್ಗಳಿಗೆ ಕಿವಿಮಾತು ಹೇಳಿದ್ದಾರೆ.
