ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್ ಧೋನಿಗೆ ಕೇರಳ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದ್ದಾರೆ. 35 ಅಡಿ ಎತ್ತರದ ಕಟೌಟ್ ನಿರ್ಮಿಸಿ ದಾಖಲೆ ಬರೆದಿದ್ದಾರೆ. ಇಲ್ಲಿದೆ ಧೋನಿಗೆ ನೀಡಿದ ಅದ್ಧೂರಿ ಸ್ವಾಗತ ವಿವರ.
ತಿರುವನಂತಪುರಂ(ಅ.31): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಬ್ಯಾಟಿಂಗ್‌ನಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಧೋನಿ ಮಿಂಚಿನ ವೇಗದ ಕೀಪಿಂಗ್ ಹಾಗೂ ಫಿಟ್ನೆಸ್‌ನಲ್ಲಿ ಧೋನಿ ಯಾವುತ್ತೂ ಹಿಂದೆ ಬಿದ್ದಿಲ್ಲ. ಇದೀಗ 5ನೇ ಏಕದಿನ ಪಂದ್ಯಕ್ಕಾಗಿ ಕೇರಳಕ್ಕೆ ಆಗಮಿಸಿದ ಧೋನಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ವೆಸ್ಟ್ ಇಂಡೀಸ್ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಕೇರಳದ ತಿರುವನಂತಪುರಂಗೆ ಬಂದಿಳಿದಿದೆ. ಕೇರಳದ ಧೋನಿ ಅಭಿಮಾನಿಗಳು ದಿಗ್ಗಜ ಕ್ರಿಕೆಟಿಗನಿಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. 35 ಅಡಿ ಎತ್ತರದ ಧೋನಿ ಕಟೌಟ್ ನಿರ್ಮಿಸಿ ಧೋನಿಗ ಸ್ವಾಗತ ನೀಡಿದ್ದಾರೆ.
ವೆಸ್ಟ್ ಇಂಡೀಸ್ಹಾಗೂ ಟಿ20 ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಿಂದ ಧೋನಿಯಿಂದ ಹೊರಗಿಡಲಾಗಿದೆ. ಜನವರಿಯಲ್ಲಿ ನಡೆಯಲಿರುವ ಆಸಿಸ್ ವಿರುದ್ಧದ ಏಕದಿನ ಸರಣಿಗೆ ಧೋನಿ ಕಮ್‌ಬ್ಯಾಕ್ ಮಾಡಲಿದ್ದಾರೆ. ನಾಳಿನ(ನ.1)ರ ಪಂದ್ಯ ಹೊರತು ಪಡಿಸಿದರೆ, ಮುಂದಿನ ವರ್ಷ ಜನವರಿವರೆಗೆ ಧೋನಿ ಮೈದಾನದಲ್ಲಿ ಕಾಣಿಸಿಕೊಳ್ಳಲ್ಲ.
