ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನೂತನ ಆಟಗಾರರಾದ ಹಾರ್ದಿಕ್ ಪಾಂಡ್ಯಾ ಹಾಗೂ ಕೇಧಾರ್ ಜಾಧವ್ ಕುರಿತಾಗಿ ಮಾತನಾಡಿದ್ದಾರೆ. ಇಬ್ಬರ ಕುರಿತಾಗಿ ಪ್ರಶಂಸೆಯ ಮಾತುಗಳನ್ನಾಡಿರುವ ಕ್ಯಾಪ್ಟನ್ ಕೊಹ್ಲಿ 'ತಂಡದಲ್ಲಿ ಪಾಂಡ್ಯಾ ಹಾಗೂ ಜಾಧವ್'ರಂತಹ ಆಟಗಾರರಿರುವುದರಿಂದ ನಾನು ಅತ್ಯಂತ ಖುಷಿಯಾಗಿದ್ದೇನೆ. ಇಬ್ಬರೂ ಕೆಳ ಕ್ರಮಾಂಕದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದಾರೆ' ಎಂದಿದ್ದಾರೆ.

ಈ ಸೀರೀಸ್'ನ್ನು 3-1 ರಿಂದ ತನ್ನದಾಗಿಸಿಕೊಂಡ ಟೀಂ ಇಂಡಿಯಾದ ಯಾವುದೇ ಹೆಚ್ಚಿನ ಪ್ರಯೋಗಗಳನ್ನು ಮಾಡಿರಲಿಲ್ಲ. ಈ ಕುರಿತಾಗಿ ಮಾತನಾಡಿರುವ ಕೊಹ್ಲಿ 'ನೀವು ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಾರ್ದಿಕ್ ಹಾಗೂ ಕೇದಾರ್'ನನ್ನು ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಸಲು ಸಾಧ್ಯವಿಲ್ಲ, ಮತ್ತೊಂದೆಡೆ ಮೇಲಿನ ಕ್ರಮಾಂಕದಲ್ಲಿರುವ ಆಟಗಾರರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ಇದು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ. ಹೀಗಾಗಿ ನಾವು ಎದುರಾಳಿ ತಂಡವನ್ನು ಗೌರವಿಸುವುದರೊಂದಿಗೆ ನಮ್ಮ ತಂಡಕ್ಕಿರುವ ಅಗತ್ಯಗಳೇನು ಎಂಬುವುದನ್ನು ಅರಿತುಕೊಳ್ಳಬೇಕು ಹಾಗೂ ಅದರಂತೆ ನಡೆದುಕೊಳ್ಳಬೇಕು' ಎಂದಿದ್ದಾರೆ.
ಬಳಿಕ ಮಾತನಾಡಿದ ವಿರಾಟ್ 'ನಾವು ಪಾಂಡ್ಯಾ ಹಾಗೂ ಕೇದಾರ್ ಇಬ್ಬರಲ್ಲೂ ಆತ್ಮವಿಶ್ವಾಸ ತುಂಬುತ್ತೇವೆ. ಇದಕ್ಕೆ ಪ್ರತಿಯಾಗಿ ಇಬ್ಬರೂ ಉತ್ತಮ ಆಟವಾಡಲು ಯತ್ನಿಸುತ್ತಾರೆ. ಇಡೀ ತಂಡಕ್ಕೆ ಇಬ್ಬರ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ. ನಮ್ಮ ತಂಡದಲ್ಲಿ ಕೆಳ ಕ್ರಮಾಂಕದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬಲ್ಲ ಆಟಗಾರರಿದ್ದಾರೆ ಎಂಬುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ' ಎಂದಿದ್ದಾರೆ.
ಇನ್ನು ಚೇಸಿಂಗ್ ಮಾಡುವಾಗ 18ನೇ ಶತಕ ಬಾರಿಸಿದ ಕುರಿತಾಗಿ ಮಾತನಾಡಿದ ಕೊಹ್ಲಿ 'ನಮ್ಮ ತಪ್ಪುಗಳನ್ನು ನಾವು ಅರಿತು ಅದನ್ನು ನಿರ್ಬಂಧಿಸಬೇಕು, ಇದೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಗೆಲುವು ತಂದುಕೊಡುತ್ತದೆ. ನಾನು ಹಲವಾರು ಬಾರಿ ಒಂದೇ ರೀತಿ ಔಟಾಗಿದ್ದೇನೆ, ಇದು ನನಗೆ ಇಷ್ಟವಾಗುವುದಿಲ್ಲ' ಎಂದಿದ್ದಾರೆ.