ಕೇದಾರ್ ಜಾಧವ್, ಮಂದಾನಾಗೆ ಒಲಿದ ವರ್ಷದ ಕ್ರೀಡಾ ಪ್ರಶಸ್ತಿ

First Published 12, Oct 2017, 6:48 PM IST
Kedar Smriti to get SJAM awards
Highlights

ಇನ್ನು ಮುಂಬೈ ರಣಜಿ ತಂಡದ ಅನುಭವಿ ಆಲ್ರೌಂಡರ್ ಅಭಿಷೇಕ್ ನಾಯರ್, ವರ್ಷದ ರಣಜಿ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರವಾದರೆ, ಮುಂಬೈ ಯುವ ಪ್ರತಿಭೆ ಪೃಥ್ವಿ ಶಾ ವರ್ಷದ ಯುವ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂಬೈ(ಅ.12): ಭಾರತದ ಬ್ಯಾಟ್ಸ್‌ಮನ್ ಕೇದಾರ್ ಜಾಧವ್, ವನಿತೆಯರ ತಂಡದ ಆಟಗಾರ್ತಿ ಸ್ಮೃತಿ ಮಂದಾನಾಗೆ ವರ್ಷದ ಕ್ರಿಕೆಟಿಗರು ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಲ್ಲದೇ ಹಾಕಿ ತಂಡದ ಗೋಲ್ ಕೀಪರ್ ಆಕಾಶ್ ಚಿಕ್ಟೆ ಮತ್ತು ಗ್ರ್ಯಾಂಡ್ ಮಾಸ್ಟರ್ ವಿದಿತ್ ಸಂತೋಷ್ ಗುಜರಾತಿ ಅವರು ವರ್ಷದ ಕ್ರೀಡಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇಲ್ಲಿನ ಕ್ರೀಡಾ ವರದಿಗಾರರ ಸಂಸ್ಥೆ, ಇದೇ ಅ.23 ರಂದು ಕ್ರೀಡಾ ಸಾಧಕರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ಇನ್ನು ಮುಂಬೈ ರಣಜಿ ತಂಡದ ಅನುಭವಿ ಆಲ್ರೌಂಡರ್ ಅಭಿಷೇಕ್ ನಾಯರ್, ವರ್ಷದ ರಣಜಿ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರವಾದರೆ, ಮುಂಬೈ ಯುವ ಪ್ರತಿಭೆ ಪೃಥ್ವಿ ಶಾ ವರ್ಷದ ಯುವ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆಯೇ 10ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ತಂಡವಾದ ಮುಂಬೈ ಇಂಡಿಯನ್ಸ್ ವರ್ಷದ ತಂಡ ಪ್ರಶಸ್ತಿಗೆ ಪಾತ್ರವಾಗಿದೆ.

loader